ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ರಾಷ್ಟ್ರೀಯ ಹೆದ್ದಾರಿ-169ರ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಲಗುಂಜಿಮನೆ ಸೇತುವೆ ಮತ್ತು ಕೊರಕ್ಕನಹಳ್ಳ ಸೇತುವೆಗಳು ಶಿಥಿಲಗೊಂಡಿದ್ದು, ವಾಹನ ಸವಾರರು ಆತಂಕಗೊಂಡಿದ್ದಾರೆ.

3.5 ಮೀ ಅಗಲವಾಗಿರುವ ಈ ರಸ್ತೆ ಮತ್ತು ಸೇತುವೆಯಲ್ಲಿ ಭಾರಿ ವಾಹನ ಚಲಿಸಬೇಕಾದರೆ ಹರ ಸಾಹಸ ಪಡಬೇಕು. ಮತ್ತೊಂದು ವಾಹನ ಎದುರಿಗೆ ಬಂದರೆ ಪರದಾಡುವಂಥ ಸ್ಥಿತಿ ಇದೆ.

1955ರಲ್ಲಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 1960 ಮೇ 18ರ ಬಳಿಕ ವಾಹನ ಸಂಚಾರಕ್ಕೆ ಸೇತುವೆ ಮುಕ್ತವಾಗಿತ್ತು. ಪ್ರಸ್ತುತ ಶೃಂಗೇರಿ ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು 21 ಕಿ.ಮೀ ವ್ಯಾಪ್ತಿಯಲ್ಲಿ ಕಿರಿದಾಗಿದೆ. ಆಯ್ದ ಹಲವು ಭಾಗಗಳಲ್ಲಿ ರಸ್ತೆ ಮತ್ತು ಸೇತುವೆಗಳು ತಗ್ಗು ಮಟ್ಟದಲ್ಲಿದೆ. ಮಳೆ ಪ್ರಾರಂಭಗೊಂಡರೆ ತಗ್ಗು ರಸ್ತೆಗಳು ನೀರಿನಿಂದ ಆವೃತ್ತಗೊಂಡು ಸಂಚಾರಕ್ಕೆ ಅಡ್ಡಿಯಾಗುತ್ತದೆ.

ಕೆರೆಕಟ್ಟೆ ರಸ್ತೆ ಶೃಂಗೇರಿ ಕ್ಷೇತ್ರದ ಪಾಲಿಗೆ ಜೀವನಾಡಿ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು ಮುಂತಾದ ಮಲೆನಾಡಿನ ಎಲ್ಲರಿಗೂ ವಿಶೇಷ ಆಸ್ಪತ್ರೆಗಳೆಲ್ಲವೂ ಇರುವುದು ಮಂಗಳೂರಿನಲ್ಲಿಯೇ. ರೈತರು, ವರ್ತಕರು, ಶೃಂಗೇರಿ ಮಠಕ್ಕೆ ಬರುವ ಯಾತ್ರಾರ್ಥಿಗಳು ಅನಿವಾರ್ಯವಾಗಿ ಇದೇ ರಸ್ತೆಯನ್ನು ನಿತ್ಯ ಬಳಸುತ್ತಾರೆ. ಕಾರ್ಕಳ ಮತ್ತು ಮಂಗಳೂರಿನಿಂದ ಅಗತ್ಯ ವಸ್ತುಗಳನ್ನು ತರುವ ಲಾರಿಗಳು ಈ ರಸ್ತೆ ಮತ್ತು ಸೇತುವೆಯನ್ನು ಬಳಸುತ್ತವೆ. ಮಳೆಗಾಲದಲ್ಲಿ ಈ ಮಾರ್ಗವಾಗಿ ರೋಗಿಗಳನ್ನು ಕರೆದುಕೊಂಡು ಬರುವ ಸ್ಥಿತಿ ಬಂದರೆ ಪ್ರಯಣ ಮಾಡುವುದು ಅತ್ಯಂತ ಪ್ರಯಾಸ ಎಂದು ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಸುರೇಶ್ ಹೇಳುತ್ತಾರೆ.

‘ಶೃಂಗೇರಿ ಮಠಕ್ಕೆ ಈ ರಸ್ತೆಯ ಮೂಲಕ ಬರುವ ಯಾತ್ರಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕಾರ್ಕಳ, ಮೂಡುಬಿದಿರೆ, ಕಾಸರಗೋಡು ಮುಂತಾದ ಭಾಗಗಳಿಂದ ತಲುಪಲು ಸಮೀಪದ ರಸ್ತೆ ಇದಾಗಿದೆ. ಕೇಂದ್ರ ಸರ್ಕಾರ ಮತ್ತು ಸಂಸದರು ಈ ಸೇತುವೆ ಮತ್ತು ರಸ್ತೆಯನ್ನು ಮರು ನಿರ್ಮಾಣ ಮಾಡಬೇಕು’ ಎಂದು ಸ್ಥಳೀಯರಾದ ಪುಟ್ಟಪ್ಪ ಹೆಗ್ಡೆ ಆಗ್ರಹಿಸಿದರು.

ರಸ್ತೆ ವಿಸ್ತರಣೆಗೆ ಕೇಂದ್ರ ಸರ್ಕಾರ ಮೀನಮೇಷ

ಶೃಂಗೇರಿಯಲ್ಲಿ ಆನೆಗುಂದದಿಂದ ಉಳುವಳ್ಳಿಯವರೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ 5 ಕಿ.ಮೀ ಒಳಗೆ ವಾಸವಿರುವ ನೂರಾರು ಕುಟುಂಬದವರು ಮತ್ತು ಮರಗಳನ್ನು ಉರುಳಿಸಿ ಕೇಂದ್ರ ಸರ್ಕಾರ ರಸ್ತೆ ನಿರ್ಮಿಸುತ್ತಿದೆ. ಆದರೆ, ಅದೇ ರಸ್ತೆಯಲ್ಲಿ ಮುರಿದು ಬೀಳುವ ಹಂತದಲ್ಲಿರುವ 2 ಸೇತುವೆ ನಿರ್ಮಾಣ, ರಸ್ತೆ ವಿಸ್ತರಣೆಗೆ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಹಿಂದೆ ಕೆರೆಕಟ್ಟೆ ಭಾಗದ ರಸ್ತೆ ವಿಸ್ತರಣೆಗೆ ಕೇಂದ್ರದಿಂದ ₹561 ಕೋಟಿ ಬಿಡುಗಡೆಯಾಗಿದೆ ಎಂದು 2019ರ ಲೋಕಸಭಾ ಚುನಾವಣೆಯಲ್ಲಿ ಹೇಳಿದ್ದರು. ಅದು ಶುದ್ಧ ಸುಳ್ಳು ಎಂದು ದಾಖಲೆ ನೀಡಿದರೂ, ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಯಾವುದೇ ಕೆಲಸ ಮಾಡದೇ ಈ ಕೆಲಸ ನನ್ನದಲ್ಲ ಎಂದು ಕೈ ಕಟ್ಟಿ ಕುಳಿತ್ತಿದ್ದಾರೆ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾವತಿಯಲ್ಲಿ ಭೂಮಿ ಗುರುತು

ರಾಷ್ಟ್ರೀಯ ಹೆದ್ದಾರಿ 169ರ ಶೃಂಗೇರಿಯ ತನಿಕೋಡು ಗೇಟ್ನಿಂದ ಕಾರ್ಕಳದ ಮಾಳ ಗೇಟ್ವರೆಗೆ ರಸ್ತೆ ವಿಸ್ತರಣೆ ಮತ್ತು ಸೇತುವೆಗಳ ನಿರ್ಮಾಣ ಕಾಮಗಾರಿಯ ವಿಸೃತ ಯೋಜನಾ ವರದಿಯೊಂದಿಗೆ, ವನ್ಯಜೀವಿ ವಿಭಾಗದ ಅನುಮತಿಗೆ ನೀಡಿದ್ದೇವೆ. ಅವರಿಗೆ ರಾಷ್ಟ್ರೀಯ ಉದ್ಯಾನದೊಳಗೆ ರಸ್ತೆ ವಿಸ್ತರಣೆ ಮಾಡಲು ಬದಲಿ 120 ಎಕರೆ ಕಂದಾಯ ಭೂಮಿಯನ್ನು ವನ್ಯಜೀವಿ ವಿಭಾಗಕ್ಕೆ ಭೂ ಸ್ವಾಧಿನ ಮಾಡಲು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಭೂಮಿ ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಅನುಮತಿಯ ಹಂತದಲ್ಲಿದೆ. ನಂತರ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ‘ಪ್ರಜಾವಾಣಿ’ಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.