ಶೃಂಗೇರಿ: `ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿ, ಪಕ್ಷ, ನ್ಯಾಯ, ಸತ್ಯಕ್ಕಾಗಿ ಹೋರಾಟ ಮಾಡುವಂಥ ಶಾಸಕ ಟಿ.ಡಿ.ರಾಜೇಗೌಡ ಮತ್ತು ಸುಧೀರ್ ಕುಮಾರ್ ಮುರೋಳ್ಳಿ ಅವರ ತೇಜೋವಧೆ ಮಾಡುತ್ತಿರುವ ಬಿಜೆಪಿಯ ಮಾಜಿ ಶಾಸಕ ಮತ್ತು ಅವರ ಹಿಂಬಾಲಕರ ನಡೆ ಖಂಡನೀಯ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ.ರಮೇಶ್ ಭಟ್ ಹೇಳಿದರು.

ಶೃಂಗೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2023ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರಿಂದ ಶಾಸಕರಾಗಿ ಆಯ್ಕೆಗೊಂಡಿದ್ದ ಟಿ.ಡಿ.ರಾಜೇಗೌಡ ಅವರಿಗೆ ಬಂದಿರುವ ಅಂಚೆ ಮತಗಳನ್ನು ಮರು ಮತ ಎಣಿಕೆ ಮೂಲಕ 255 ಮತಗಳನ್ನು ಅಸಿಂಧು ಮಾಡಿರುವುದು ಸಂವಿಧಾನ ಬಾಹಿರವಾಗಿದೆ. ಎಣಿಕೆ ಸಂದರ್ಭದಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾಗಿತ್ತು. ಆಗ ಸಿಂಧು ಆಗಿದ್ದ ಮತ, ಈಗ ಅಸಿಂಧು ಆಗಿರುವುದು ಹೇಗೆ. ಈ ಘಟನೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಮೂಲ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.

ಕಾಂಗ್ರೆಸ್ ಮುಖಂಡ ಅನಿಲ್ ಹೊಸಕೊಪ್ಪ ಮಾತನಾಡಿ, ಸತ್ಯವನ್ನು ಮರೆ ಮಾಚಲು ಬಿಜೆಪಿ ಈಗ ಹರ ಸಾಹಸ ಮಾಡುತ್ತಿದೆ. ಅಂದು ಬಿಜೆಪಿ ಏಜೆಂಟರಾಗಿದ್ದ ಅದ್ದಡ ಸತೀಶ್ ಮತ್ತು ಶೆಟ್ಟಿಗದ್ದೆ ರಾಮಸ್ವಾಮಿ ಅವರು ಪಾರದರ್ಶಕತೆ ಇದೆ ಎಂದು ಹೇಳಿರುವ ಬಗ್ಗೆ ಅವರನ್ನು ಏಕೆ ಪ್ರಶ್ನಿಸುತ್ತಿಲ್ಲ. ತನಿಖೆ ನಡೆಯಲಿ ಎಂದು ಸಿ.ಟಿ ರವಿ ಹೇಳಿದಾಗಲೂ ಅವರನ್ನು ಏಕೆ ಪ್ರಶ್ನಿಸುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಮುಖಂಡರು ಹೈಕೋರ್ಟ್ ತೀರ್ಪಿನ ನಂತರ ಜೀವರಾಜ್ ಪರ ಮಾತನಾಡುತ್ತಿಲ್ಲ. ಮೇ 21ರ ನಂತರ ಜೀವರಾಜ್ ಹಿಂಬಾಲಕರು ದಿನದಿಂದ ದಿನಕ್ಕೆ ಕಡಿಮೆಯಾಗುವುದರಲ್ಲಿ ಅನುಮಾನ ಇಲ್ಲ ಎಂದರು.

ಕೆ.ಆರ್ ವೆಂಕಟೇಶ್, ಶಿವಮೂರ್ತಿ, ರಾಜಕುಮಾರ್ ಹೆಗ್ಡೆ, ಭಾಸ್ಕರನಾಯ್ಕ್, ಕೆ.ಎಂ.ರಾಮಣ್ಣ, ಲ್ಯಾಬ್ ದಿನೇಶ್ ಶೆಟ್ಟಿ, ಎಂ.ಎನ್.ಚಂದ್ರಶೇಖರ್, ಸಿರಿಮನೆ ಭಾಸ್ಕರ್, ಪುಟ್ಟಪ್ಪಹೆಗ್ಡೆ, ಕಲ್ಲಾಳಿ ಪ್ರದೀಪ್ ಭಾಗವಹಿಸಿದ್ದರು.

2023ರ ವಿಧಾನಸಭಾ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸುಧಾಕರ ಶೆಟ್ಟಿ ಮಾತನಾಡಬೇಕು. ಮತ ಎಣಿಕೆ ದಿನದಂದು ಹಾಜರಿದ್ದ ಎಲ್ಲ ಪಕ್ಷದ ಏಜೆಂಟರು ಏಣಿಕೆ ಸರಿಯಾಗಿದೆ ಎಂದು ಖುದ್ದು ಸಹಿ ಮಾಡಿರುತ್ತಾರೆ. ಬಿಜೆಪಿ ಪರವಾಗಿರುವ ಸುಧಾಕರ ಶೆಟ್ಟಿ ಅಂದು ಹಾಜರಿದ್ದು, ಮತ ಏಣಿಕೆ ಸಮರ್ಪಕವಾಗಿರಲಿಲ್ಲ ಎಂದು ಹೇಳಿಲ್ಲ. ಈಗಲಾದರೂ ವಾಸ್ತವ ಏನು ಎಂದು ಜನರಿಗೆ ಮನದಟ್ಟು ಮಾಡಬೇಕು. ಅಕ್ರಮ ನಡೆದಿರುವುದಾದರೆ ಅದರ ತನಿಖೆಯಾಗಬೇಕು ಎಂದು ಬಿಜೆಪಿ ಒತ್ತಾಯಿಸದೆ, ನಮ್ಮ ನಾಯಕರ ಬಗ್ಗೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಬ್ಲಾಕ್ ಕೆ.ಎಂ ರಮೇಶ್ ಭಟ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-126-489354528

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.