ಶೃಂಗೇರಿ: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ನಂತರ ಶಾಸಕ ಸ್ಥಾನ ಕಳೆದುಕೊಂಡಿರುವ ಟಿ.ಡಿ.ರಾಜೇಗೌಡ ಅವರು ದೇವರ ಮೊರೆ ಹೋಗಿದ್ದಾರೆ. ದೇಗುಲ, ಮಸೀದಿ, ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಿ ‘ಕಾಂಗ್ರೆಸ್ನಿಂದ ತಪ್ಪಾಗಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ’ ಎಂದು ಬೇಡಿಕೊಂಡರು.

ಅಂಚೆ ಮತಗಳ ಮರುಎಣಿಕೆಯ ಏಜೆಂಟ್ ಸುಧೀರ್ಕುಮಾರ್ ಮುರೊಳ್ಳಿ ಹಾಗೂ ಕಾರ್ಯಕರ್ತರೊಂದಿಗೆ ದಿನವಿಡೀ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದರು. ಕೊಪ್ಪದ ವೀರಭದ್ರಸ್ವಾಮಿ ದೇಗುಲದಲ್ಲಿ ಮೊದಲಿಗೆ ಪೂಜೆ ಸಲ್ಲಿಸಿದರು. ನಂತರ ಜಾಮಿಯಾ ಮಸೀದಿ ಮತ್ತು ನಿತ್ಯಧಾರ ಮಾತೆ ಚರ್ಚ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ದೇವರ ಮೂರ್ತಿಯ ಎದುರು ನಿಂತು ಅವರು, ‘ನಾನು ಯಾರಿಗೂ ಕೇಡು ಬಯಸಿದವನಲ್ಲ. ಮರು ಮತ ಎಣಿಕೆಯಲ್ಲಿ ನನಗೆ ಮೋಸವಾಗಿದೆ. ಮತಪತ್ರ ತಿದ್ದುವ ಮೋಸದ ಕೆಲಸ ನಡೆದಿದೆ’ ಎಂದು ಹೇಳಿದರು.

ಸುಧೀರ್ಕುಮಾರ್ ಅವರು, ‘ನಮ್ಮಿಂದ ಅಕ್ರಮ ಆಗಿಲ್ಲ. ಹಿಂದೆ ಅಸಿಂಧುವಾಗಿದ್ದ ಮತಗಳನ್ನು ರಾಜೇಗೌಡರ ಬುಟ್ಟಿಗೆ ಹಾಕಲಾಗಿದೆ ಎಂಬ ಆರೋಪ ಸುಳ್ಳು’ ಎಂದು ಪ್ರಮಾಣ ಮಾಡಿದರು.

‘ಈಗ ಯಾರಿಗೆ ಲಾಭ ಆಗಿದೆಯೋ ಅವರು, ಅವರ ಸಹಚರರು ಮತಪತ್ರಗಳ ತಿದ್ದಿದ್ದಾರೆ. ಅನ್ಯಾಯ ಮಾಡಿದವರಿಗೆ ಶಿಕ್ಷೆ ಕೊಡಬೇಕು’ ಎಂದು ಪ್ರಾರ್ಥಿಸಿದರು.

ಧರ್ಮಸ್ಥಳದಲ್ಲೂ ಪ್ರಾರ್ಥನೆ

ಶುಕ್ರವಾರ ಕೊಪ್ಪ ದೇವಸ್ಥಾನದಲ್ಲಿ ಆಣೆ ಮಾಡಿದ್ದ ಬಿಜೆಪಿ ಏಜೆಂಟರಾದ ಸತೀಶ್ ಅದ್ದಡ ಹಾಗೂ ರಾಮಸ್ವಾಮಿ ಶೆಟ್ಟಿಗದ್ದೆ ಶನಿವಾರ ಧರ್ಮಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ‘2023ರಲ್ಲಿ ಸತೀಶ್ ಅದ್ದಡ ಅವರು ಅಂಚೆ ಮತಗಳ ಟೇಬಲ್ ಮತ್ತು ನಾನು ಇವಿಎಂ ನೋಡಿಕೊಳ್ಳುತ್ತಿದ್ದೆ. ನಮ್ಮಿಬ್ಬರ ಮೇಲೆ ಕೆಲ ಬಿಜೆಪಿ ಕಾರ್ಯಕರ್ತರೇ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಹರಕೆ ಹೇಳಿಕೊಂಡಿದ್ದೇವೆ’ ಎಂದು ರಾಮಸ್ವಾಮಿ ಹೇಳಿದರು.

ಸೋಲು ಅರಗಿಸಿಕೊಳ್ಳುವ ಶಕ್ತಿ ಇಲ್ಲ: ಜೀವರಾಜ್

‘ಟಿ.ಡಿ.ರಾಜೇಗೌಡರಿಗೆ ಸೋಲು ಅರಗಿಸಿಕೊಳ್ಳುವ ಶಕ್ತಿ ಇಲ್ಲವಾಗಿದೆ. ಅಧಿಕಾರ ಕಳೆದು ಕೊಂಡು ದೇಗುಲ
ಸುತ್ತುತ್ತಿದ್ದಾರೆ’ ಎಂದು ಶಾಸಕ ಡಿ.ಎನ್.ಜೀವರಾಜ್ ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬಿಜೆಪಿ ಏಜೆಂಟರಾಗಿದ್ದ ಸತೀಶ್ ಅದ್ದಡ, ರಾಮಸ್ವಾಮಿ ಶೆಟ್ಟಿಗದ್ದೆ ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಅವರ ವಿರುದ್ಧ ನಾವು ಅಪಪ್ರಚಾರ ಮಾಡಿಲ್ಲ, ಯಾರಾದರೂ ಮಾಡಿದ್ದರೆ ತಪ್ಪು’ ಎಂದರು.

‘ಅವರು ಈಗ ಏಕೆ ದೇವಾಲಯಗಳಿಗೆ ಹೋಗಿ ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1296827609

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.