ಶೃಂಗೇರಿ: ಶಂಕರ ಜಯಂತಿ ಪ್ರಯುಕ್ತ ಶೃಂಗೇರಿ ಶಾರದಾ ಮಠದ ಮುಖ್ಯ ಬೀದಿಯಲ್ಲಿ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶಂಕರಾಚಾರ್ಯರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶಾರದಾ ಮಠದ ಆನೆಗಳು, ತಟ್ಟಿರಾಯ, ಛತ್ರಿ ಚಾಮರಗಳೊಂದಿಗೆ ಸಾಗಿ ಬಂದ ಮೆರವಣಿಗೆಯಲ್ಲಿ ಮಠದ ಸಿಬ್ಬಂದಿ, ಪುರೋಹಿತರು, ಭಕ್ತರು ಭಾಗವಹಿಸಿದ್ದರು. ಮುಖ್ಯ ಬೀದಿಯಲ್ಲಿ ಬಿಡಿಸಿದ ರಂಗೋಲಿ ಮೆರವಣಿಗೆಗೆ ಮೆರುಗು ನೀಡಿದವು. ಪಟ್ಟಣದ ನಾಗರಿಕರು ಹೂ– ಹಣ್ಣು ಹಾಗೂ ಆರತಿ ಮಾಡಿ, ಪೂಜೆ ಸಲ್ಲಿಸಿದರು. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಠದ ಆವರಣದಲ್ಲಿರುವ ತುಂಗಾ ನದಿ ತೀರವನ್ನು ‘ಶಂಕರ ಘಾಟ್’ ಎಂದು ನಾಮಕರಣ ಮಾಡಿ, ಗುರುಗಳು ಉದ್ಘಾಟಿಸಿದರು. ಶಂಕರಾಚಾರ್ಯ ದೇಗುಲದಲ್ಲಿ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು.

ಸಹಸ್ರ ನಾಮಾರ್ಚನೆ, ಚತುರ್ವೇದ ಪಾರಾಯಣ, ಸೂತಸಂಹಿತಾ, ಶ್ರೀಮಾಧವೀಯ ಶಂಕರ ದಿಗ್ವಿಜಯ, ಪಂಚಾಮೃತ ಅಭಿಷೇಕ, ಶತ ರುದ್ರಾಭಿಷೇಕ, ಶ್ರೀಸೂಕ್ತ, ಪುರುಷ ಸೂಕ್ತ ಮಂತ್ರದೊಂದಿಗೆ ಕನಕಾಭಿಷೇಕ ನಡೆಯಿತು.

ಮಹಾಮಂಗಳಾರತಿ ನಡೆದ ಬಳಿಕ ಉಭಯ ಗುರುಗಳು ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಿದರು. ಶಾರದಾ ಮಠದ ಪುರೋಹಿತರಾದ ಸೀತಾರಾಮ ಶರ್ಮ, ಶಿವಕುಮಾರ ಶರ್ಮ, ಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-28-1239950289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.