ಶೃಂಗೇರಿ: ರಾತ್ರಿ ಸಂಚರಿಸುವ ಸಾರ್ವಜನಿಕರಿಗೆ, ಮಹಿಳೆಯರಿಗೆ ಸೇತುವೆಯಲ್ಲಿ ಅಳವಡಿಸಿರುವ ಸೋಲಾರ್ ದೀಪ ಸಹಾಯಕವಾಗಲಿದೆ ಎಂದು ಶಾರದಾ ಪೀಠದ ಉಭಯ ಗುರುಗಳ ಆಪ್ತ ಸಹಾಯಕ ಕೃಷ್ಣಮೂರ್ತಿ ಭಟ್ ಹೇಳಿದರು.

ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಿಂದ ಕಲ್ಕಟ್ಟೆಗೆ ಸಂಪರ್ಕಿಸುವ ತೂಗು ಸೇತುವೆಯಲ್ಲಿ ಹೆಬ್ಬಾರ ಬ್ರಾಹ್ಮಣ ಸಭಾದಿಂದ ಅಳವಡಿಸಲಾದ ಎರಡು ಸೋಲಾರ್ ದೀಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಿರು ಸೇತುವೆ ಮೂಲಕ ಪ್ರತಿದಿನ ನೂರಾರು ಜನರು ಸಂಚರಿಸುತ್ತಾರೆ. ಪಟ್ಟಣವನ್ನು ಸಂಪರ್ಕಿಸಲು ಹತ್ತಿರದ ದಾರಿಯಾಗಿದ್ದು, ಶಾರದಾ ಮಠಕ್ಕೆ ಉದ್ಯೋಗಕ್ಕೆ ಬರುವವರೂ ಈ ಸೇತುವೆಯಲ್ಲಿ ಸಂಚರಿಸುತ್ತಾರೆ. ಇದೊಂದು ಉತ್ತಮ ಸೇವಾ ಕಾರ್ಯವಾಗಿದ್ದು, ಹೆಬ್ಬಾರ ಬ್ರಾಹ್ಮಣ ಸಭಾವು ಜನ ಸಾಮಾನ್ಯರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದೆ ಎಂದರು.

ಹೆಬ್ಬಾರ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯರಂಗ ಕೋಟೇತೋಟ ಮಾತನಾಡಿ, ಈ ಸೇತುವೆಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ರಾತ್ರಿ ಸಂಚರಿಸುವ ಮಹಿಳೆಯರಿಗೆ 4 ತಿಂಗಳಿನಿಂದ ತೊಂದರೆ ಆಗಿತ್ತು ಎಂಬುದನ್ನು ಮಹಿಳೆಯರು ನಮ್ಮ ಸಂಘಟನೆ ಗಮನಕ್ಕೆ ತಂದಿದ್ದರು. ವಿದ್ಯುದ್ದೀಪ ಅಳವಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ನಮ್ಮ ಸಮಾಜದ, ಬೆಂಗಳೂರಿನಲ್ಲಿ ನೆಲಸಿರುವ ಎ.ವಿ. ಲಕ್ಷ್ಮೀನಾರಾಯಣ ಅವರು ಸೋಲಾರ್ ದೀಪ ಒದಗಿಸಿದ್ದು, ಇಲ್ಲಿನ ಹೆಬ್ಬಾರ ಘಟಕದ ಸಹಯೋಗದಲ್ಲಿ ದೀಪ ಅಳವಡಿಸಲಾಗಿದೆ ಎಂದರು.

ಹೆಬ್ಬಿಗೆ ಗಣೇಶ್, ಹೆಬ್ಬಾರ ಬ್ರಾಹ್ಮಣ ಸಭಾ ಅಧ್ಯಕ್ಷ ಎ.ಎಂ. ಶ್ರೀಧರರಾವ್, ಗುಬ್ಬಗೋಡು ವೆಂಕಟರಾವ್, ಪ್ರವೀಣ ಮರಟೆ, ಶ್ರೀನಿವಾಸ್, ಚಂದ್ರಕಾಂತ ರಾವ್, ಅವಿನಾಶ್, ಎ.ಜಿ. ಪ್ರಶಾಂತ್, ಕೆ.ಆರ್. ದಿನೇಶ್, ಕೆ.ಎಲ್. ಗೋಪಾಲಕೃಷ್ಣ, ನವೀನ ಗೌಡ, ನಾಗೇಂದ್ರ, ಉಷಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-126-444082958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.