ಶೃಂಗೇರಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ರೈತ ಭವನದಲ್ಲಿ ನಡೆದ ಚುನಾವಣೆಯಲ್ಲಿ 11 ಜನ ನಿರ್ದೇಶಕರಾಗಿ ಜಯಗಳಿಸಿದ್ದಾರೆ.

ಸಂಘದಲ್ಲಿ 14 ಜನ ನಿರ್ದೇಶಕರ ಸ್ಥಾನವಿದ್ದು, 3 ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ. 11 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 23 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಅದರಲ್ಲಿ 11 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 682 ಮತದಾರರು ಇದ್ದು, ಇದರಲ್ಲಿ 652 ಮತದಾರರು ಮತ ಚಲಾಯಿಸುವ ಮೂಲಕ ಶೇ 95ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ 9ಕ್ಕೆ ಆರಂಭವಾದ ಮತದಾನ ಮಧ್ಯಾಹ್ನ 4ರವರೆಗೂ ನಡೆಯಿತು.

ದೇವೆಂದ್ರ ಕಾವಡಿ, ಜಿ. ಮಂಜುನಾಥ್ ಗಂಡಘಟ್ಟ, ಅರ್ಪಿತ ಸಚ್ಚೀಂದ್ರ ಹೋಸ್ತೋಟ, ಎಚ್.ಕೆ. ನವೀನ್ ಕಿಗ್ಗಾ, ಪ್ರಭವತಿ ವೆಂಕಟೇಶ್ ಹೆಗ್ಡೆ, ಪುರುಷೋತ್ತಮ್ ಹೆಗ್ಡೆ ಚೊಳರಮನೆ, ಎಂ.ಸಿ. ಮಂಜುನಾಥ್ ಮಾಗೋಡು, ರಮೇಶ್ ಕೆ.ಎಸ್. ಮೆಣಸೆ(ಕಚ್ಚೋಡಿ), ಶಮಂತ್ ಟಿ.ಜಿ. ತೋರಳ್ಳಿ, ಸುಭಾಷ್ ಟಿ. ಕೈಮನೆ, ಸುರೇಶ್ ತಲವಂತಿ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಎಸ್.ಪ್ರಕಾಶ್ ಸಾರದಬಾಗಿಲು, ರಾಜೇಶ್ ಕೆಳಕೊಪ್ಪ, ಚೇತನ್ ಹೆಗ್ಡೆ ಚೊಳರಮನೆರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಬೆಂಬಲ ಮಾಡಿಕೊಂಡವರಲ್ಲಿ ಇಬ್ಬರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜೆಜೆಪಿ ಬೆಂಬಲಿತ 9 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ತಹಶೀಲ್ದಾರ್ ಅನೂಪ್ ಸಂಜೋಗ್ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮತ ದಾನಕ್ಕೆ 2 ಭೂತ್ಗಳನ್ನು ನಿರ್ಮಿಸಿ 6ವಿಭಾಗಗಳಾಗಿ ಮಾಡಿದ್ದರು. ನೂಕು ನುಗ್ಗಲು ಆಗದಂತೆ ಒಂದೇ ಸಮಯದಲ್ಲಿ 6 ಜನ ಮತ ಚಲಾಯಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು. ಮತದಾನ ಮುಗಿದ ನಂತರ ರೈತ ಭವನದಲ್ಲಿ ತಡರಾತ್ರಿಯವರೆಗೆ ಮತ ಎಣಿಕೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-126-812184127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.