ಶೃಂಗೇರಿ: ‘ಮಳೆದೇವರೆಂದೇ ಖ್ಯಾತಿ ಪಡೆದ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಶಾಂತ ಸಮೇತ ಋಷ್ಯಶೃಂಗೇಶ್ವರ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು. ಆಗ ಧಾರ್ಮಿಕ ಪರಂಪರೆ, ಸಂಸ್ಕೃತಿ ಮತ್ತು ದೇವಸ್ಥಾನ ಉಳಿಸಲು ಸಾಧ್ಯ’ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಶೃಂಗೇರಿಯ ಕಿಗ್ಗಾದ ಶಾಂತ ಸಮೇತ ಋಷ್ಯಶೃಂಗ ದೇವಸ್ಥಾನದಲ್ಲಿ ಶಾಸಕರ ಪ್ರದೇಶಾಭಿವೃದ್ಧಿಯಿಂದ ₹10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ರಥವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿ ಅವರು ಮಾತನಾಡಿದರು.

ಸರ್ಕಾರವು ಧಾರ್ಮಿಕ ಕೇಂದ್ರಗಳಿಗೆ ನೇರವಾಗಿ ಧಾರ್ಮಿಕ ದತ್ತಿ ಇಲಾಖೆಗಳ ಮೂಲಕ ಅನುದಾನ ನೀಡುತ್ತಿದೆ. ಈ ಅನುದಾನ ಕೇವಲ ಧಾರ್ಮಿಕ ಚಟುವಟಿಕೆಗಳಿಗಾಗಿ ನೀಡುವುದಿಲ್ಲ, ಬದಲಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಉದ್ದೇಶಗಳಿಗಾಗಿ ನೀಡಲಾಗುತ್ತದೆ. ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಅನುದಾನ ನೀಡಲಾಗುತ್ತದೆ. ಇದರಿಂದ ರಸ್ತೆ, ನೀರು, ವಿದ್ಯುತ್ ಮತ್ತು ವಸತಿಯಂತಹ ಮೂಲಭೂತ ಸೌಕರ್ಯಗಳು ಸುಧಾರಣೆಯಾಗಿ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಅನೇಕ ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್ಗಳು ಶಿಕ್ಷಣ, ಆರೋಗ್ಯ ಮತ್ತು ಬಡವರಿಗೆ ಅನ್ನದಾನದಂತಹ ಸಾಮಾಜಿಕ ಸೇವೆಗಳಲ್ಲಿ ತೊಡಗಿರುತ್ತವೆ. ಈ ಸಾಮಾಜಿಕ ಕಾರ್ಯಕ್ರಮಗಳಿಗೆ ನೆರವು ನೀಡಲು ಸರ್ಕಾರವು ಅನುದಾನವನ್ನು ಒದಗಿಸುತ್ತದೆ. ದೇವಸ್ಥಾನಗಳ ಅಭಿವೃದ್ಧಿಯಿಂದ ಸ್ಥಳೀಯವಾಗಿ ಅಭಿವೃದ್ಧಿ ಹೊಂದುತ್ತದೆ ಎಂದರು.

ಅನೇಕ ಧಾರ್ಮಿಕ ಸ್ಥಳಗಳು ಐತಿಹಾಸಿಕ ಮತ್ತು ವಾಸ್ತು ಶಿಲ್ಪದ ಮಹತ್ವವನ್ನು ಹೊಂದಿವೆ. ಅವುಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆ ಕಾರ್ಯಗಳಿಗೆ ಅನುದಾನ ನೀಡುವ ಮೂಲಕ, ಸರ್ಕಾರವು ನಮ್ಮ ರಾಷ್ಟ್ರೀಯ ಪರಂಪರೆಯನ್ನು ಉಳಿಸಿದೆ. ಅನುದಾನವನ್ನು ಸಾಮಾನ್ಯವಾಗಿ ಮೂಲಸೌಕರ್ಯಗಳ ಅಭಿವೃದ್ಧಿ, ಭದ್ರತಾ ವ್ಯವಸ್ಥೆಗಳ ಸುಧಾರಣೆ ಮತ್ತು ಪರಂಪರೆಯ ಸಂರಕ್ಷಣೆ ಯೋಜನೆಗಳ ರೂಪದಲ್ಲಿ ನೀಡಲಾಗುತ್ತದೆ. ಇದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿ ಮತ್ತು ಜನಕಲ್ಯಾಣದ ಮೂಲ ದೃಷ್ಟಿ ಎಂದು ಶಾಸಕ ರಾಜೇಗೌಡ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್ ಮಾತನಾಡಿ, ‘ಧಾರ್ಮಿಕ ಪರಂಪರೆ, ಸಂಸ್ಕೃತಿ ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಶಾಸಕ ಟಿ.ಡಿ ರಾಜೇಗೌಡರು ಸದಾ ಬದ್ಧರಾಗಿದ್ದಾರೆ. ಸ್ಥಳೀಯ ಭಕ್ತರ ಭಾವನೆಗಳಿಗೆ ಮೌಲ್ಯ ನೀಡುವ ಅವರು, ದೇವಾಲಯಗಳ ಮೂಲಭೂತ ಸೌಕರ್ಯಗಳ ವೃದ್ಧಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಬಲ ಹಾಗೂ ಧಾರ್ಮಿಕ ಪರಂಪರೆಯನ್ನು ಸಂರಕ್ಷಣೆ ಮಾಡಲು ನಿರಂತರ ಸಹಕಾರ ನೀಡುತ್ತಿದ್ದಾರೆ. ಈ ಬದ್ಧತೆಯ ಭಾಗವಾಗಿಯೇ ಕಿಗ್ಗಾದ ಋಷ್ಯಶೃಂಗ ದೇವಸ್ಥಾನಕ್ಕೆ ನೂತನ ರಥ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡಿ, ಇಂದು ದೇವಾಲಯಕ್ಕೆ ರಥ ಹಸ್ತಾಂತರಿಸಲಾಗಿದೆ’ ಎಂದರು.

ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೂಡ್ಲು ಮಂಜುನಾಥ್, ಸದಸ್ಯರಾದ ಕೇಶವ, ವಿಠಲ್ ಶೆಟ್ಟಿ, ಪ್ರಜ್ವಲ್ ಸಿಂದೋಡಿ, ಕುಮಾರ ಬೆನ್ನೋಳ್ಳಿ, ವಿಶಾಲಾಕ್ಷಿ, ತ್ರಿವೇಣಿ, ಮರ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಹೆಗ್ತೂರು, ಸದಸ್ಯರಾದ ಸಂದೀಪ್, ಮುಖಂಡರಾದ ದಿನೇಶ್ ಹೆಗ್ಡೆ, ಪುಟ್ಟಪ್ಪ ಹೆಗ್ಡೆ, ಕುರದಮನೆ ವೆಂಕಟೇಶ್, ರಾಜ್ಕುಮಾರ್ ಹೆಗ್ಡೆ, ರಾಜೇಶ್ ದ್ಯಾವಂಟು, ಪ್ರದೀಪ್ ಯಡದಾಳು, ಲಕ್ಷ್ಮೀಶ, ಸತ್ಯನಾರಯಣ, ಅರ್ಚಕರಾದ ಶಿವರಾಮ್ ಭಟ್, ರಥ ನಿರ್ಮಿಸಿದ ವಿಶ್ವಕರ್ಮ ಸಮುದಾಯದ ಶಿಲ್ಪಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಸ್ಥಳೀಯ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.