‘ಮುಖ್ಯಮಂತ್ರಿ ಮಾತೃಶ್ರೀ’ ಯೋಜನೆ ಜಾರಿ

7
ಯೋಜನೆ ಸದುಪಯೋಗ ಪಡೆಯಲು ಸಲಹೆ

‘ಮುಖ್ಯಮಂತ್ರಿ ಮಾತೃಶ್ರೀ’ ಯೋಜನೆ ಜಾರಿ

Published:
Updated:

ಚಿಕ್ಕಮಗಳೂರು: ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಮಾತೃಶ್ರೀ’ ಯೋಜನೆಯಡಿ ಜಾರಿಗೊಳಿಸಿದ್ದು, ಅದರಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ₹6 ಸಾವಿರ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಸಿ.ಬಸವರಾಜಯ್ಯ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

2018ರ ನವೆಂಬರ್‌ 1ರಿಂದ ಯೋಜನೆ ಜಾರಿಯಾಗಿದೆ. ಹೆರಿಗೆಯ ಪೂರ್ವದ ಕೊನೆ ಮೂರು ತಿಂಗಳು ಹಾಗೂ ಹರಿಗೆ ನಂತದ ಮೂರು ತಿಂಗಳು ಮಾಸಿಕ ₹1 ಸಾವಿರವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಒಬ್ಬ ಮಹಿಳೆ ಎರಡು ಹೆರಿಗೆಗಳಿಗೆ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಗರ್ಭಿಣಿ ಮತ್ತು ಬಾಣಂತಿಯರ ಮಾನಸಿಕ ಆರೋಗ್ಯ ಕಾಪಾಡುವುದು. ಪೌಷ್ಠಿಕತೆ ಹೆಚ್ಚಿಸುವುದು. ಆರೋಗ್ಯ ಮಟ್ಟ ಉತ್ತಮಗೊಳಿಸುವುದು. ಕಡಿಮೆ ತೂಕದ ಶಿಶು ಜನನ ಪ್ರಮಾಣ ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಯೋಜನೆಯಡಿ ಸೌಲಭ್ಯ ಪಡೆಯಲು ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾಗಬೇಕು. ಆರೋಗ್ಯ ತಪಾಸಣಾ ದಾಖಲೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ ಪುಸ್ತಕ, ಬಿಪಿಎಲ್ ಕಾರ್ಡ್ ಪ್ರತಿಗಳನ್ನು ಅರ್ಜಿಯೊಂದಿಗೆ ನೀಡಬೇಕು. ಮಾತೃವಂದನಾ ಮತ್ತು ಜನನಿ ಸುರಕ್ಷಿತ ಯೋಜನೆಯ ಫಲಾನುಭವಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಜನನಿ ಸುರಕ್ಷ ಯೋಜನೆಯಡಿ ಬಾಣಂತಿಗೆ ₹1 ಸಾವಿರ ಸಹಾಯ ಧನ ನೀಡಲಾಗುವುದು. ಮಾತೃಪೂರ್ಣ ಯೋಜನೆಯಡಿ ಜಿಲ್ಲೆಯಲ್ಲಿ 3,535 ಗರ್ಭಿಣಿಯರು, 3,675 ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !