4ರಿಂದ ಸಿಪಿಐ (ಎಂಎಲ್‌) ರಾಜ್ಯ ಸಮ್ಮೇಳನ

7

4ರಿಂದ ಸಿಪಿಐ (ಎಂಎಲ್‌) ರಾಜ್ಯ ಸಮ್ಮೇಳನ

Published:
Updated:
Deccan Herald

ಚಿಕ್ಕಮಗಳೂರು: ಸಿಪಿಐ (ಎಂಎಲ್‌) ಪಕ್ಷದ ರಾಜ್ಯ ಸಮ್ಮೇಳನವು ನಗರದ ಅಂಬೇಡ್ಕರ್‌ ಭವನದಲ್ಲಿ ಇದೇ 4, 5 ಮತ್ತು 6 ರಂದು ನಡೆಯಲಿದೆ ಎಂದು ಸಿಪಿಐಎಂಎಲ್‌ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಇಲ್ಲಿ ಬುಧವಾರ ತಿಳಿಸಿದರು.

ಸಿಪಿಐಎಂಎಲ್‌ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಾಮಚಂದ್ರನ್‌ ಅವರು 4ರಂದು ಮಧ್ಯಾಹ್ನ 2.30ಕ್ಕೆ ಉದ್ಘಾಟನೆ ನೆರವೇರಿಸುವರು. ಪಾಲಿಟ್‌ ಬ್ಯುರೊ ಸದಸ್ಯರಾದ ಪಿ.ಜೆ.ಜೇಮ್ಸ್‌, ಮಾನಸಯ್ಯ ಪಾಲ್ಗೊಳ್ಳುವರು. ರೈತರು, ಕಾರ್ಮಿಕರ ಸಂಕಷ್ಟಗಳು, ಶಿಕ್ಷಣ, ಉದ್ಯೋಗ ಮೊದಲಾದ ಕ್ಷೇತ್ರಗಳ ಸಮಸ್ಯೆಗಳ ಕುರಿತು ಚರ್ಚಿಸಿ ನಿರ್ಣಯಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರೈತ ಕಾರ್ಮಿಕರು, ಬಡವರು, ದಲಿತರು, ಆದಿವಾಸಿಗಳ ಪರ ಹಲವಾರು ಹೋರಾಟಗಳಿಗೆ ಸಿಪಿಐಎಂಎಲ್‌ ನಾಯಕತ್ವ ವಹಿಸಿದೆ. ದೇಶದಲ್ಲಿ ಪರ್ಯಾಯ ಜನತಾ ರಾಜಕೀಯ ಚಟುವಟಿಕೆ ನಡೆಸುತ್ತಿದೆ. ಸಿಪಿಐಎಂಎಲ್‌ ಮಹಾಧಿವೇಶನವು ಈ ಬಾರಿ ಬೆಂಗಳೂರಿನಲ್ಲಿ ನವೆಂಬರ್‌ 27ರಿಂದ ಡಿಸೆಂಬರ್‌ 2ರವರೆಗೆ ಜರುಗಲಿದೆ. ಈ ಅಧಿವೇಶನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸವರು. ಮಹಾಧಿವೇಶನಕ್ಕೆ ಪೂರಕವಾಗಿ ಇದೇ 4ರಿಂದ ರಾಜ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದರು.

‘ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ನವ ಉದಾರವಾದಿ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿದೆ. ಮೋದಿ ಅವರು ಬಂಡವಾಳಸ್ಥರು, ಕಾರ್ಪೊರೇಟ್‌ ಕುಳಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಡಾ.ಸ್ವಾಮಿನಾಥನ್‌ ಅವರ ವರದಿ ಶಿಫಾರಸುಗಳನ್ನು ಜಾರಿ ಮಾಡಿಲ್ಲ. ಭೂಮಾಲೀಕರ ಪರವಾದ ನೀತಿಗಳನ್ನೇ ಅನುಷ್ಠಾನಗೊಳಿಸಿದ್ದಾರೆ’ ಎಂದು ದೂಷಿಸಿದರು.

‘ರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾದ ಮುಖ್ಯಮಂತ್ರಿಯೇ ಅಸಹಾಯಕರಂತೆ ನಡೆದುಕೊಳ್ಳುತ್ತಿದ್ದಾರೆ. ಅವಕಾಶವಾದಿ ರಾಜಕಾರಣಕ್ಕೆ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್ ಮೂರೂ ಪಕ್ಷಗಳು ಕಾರಣವಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ’ ಎಂದು ದೂರಿದರು.

ಸಿಪಿಐಎಂಎಲ್‌ನ ಜಗದೀಶ್‌, ವಿಜಯ್‌ ಹಾಂದಿ, ಕೃಷ್ಣ, ಪರಮೇಶ್‌, ನಾರಾಯಣ, ಬಸವರಾಜ್‌ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !