ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್.ಆರ್.ಪುರ: ಪ್ರಾಚ್ಯವಸ್ತು ರಕ್ಷಣೆ ವಿದ್ಯಾರ್ಥಿಗಳ ಕರ್ತವ್ಯ

ತಾಲ್ಲೂಕು ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೇವ್ಯಾನಾಯಕ್
Last Updated 15 ಫೆಬ್ರವರಿ 2023, 6:50 IST
ಅಕ್ಷರ ಗಾತ್ರ

ಸಿಂಸೆ(ಎನ್.ಆರ್.ಪುರ): ‘ಮಲೆನಾಡಿನ ಹೆಮ್ಮೆಯ ರಾಜಕೀಯ ಮತ್ಸದಿ ಮಡಬೂರು ಎಚ್.ಟಿ ರಾಜೇಂದ್ರ ಅವರಿಗೆ ಫೆ.24 ರಂದು ಮಧ್ಯಾಹ್ನ 3 ಗಂಟೆಗೆ ಕೊಪ್ಪದ ಬಾಳಗಡಿಯಲ್ಲಿರುವ ದ್ಯಾವೇಗೌಡ ಒಕ್ಕಲಿಗರ ಸಮುದಾಯ ಭವನದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ’ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷ ಮುಂಡುಗೋಡು ಶ್ರೀನಿವಾಸಮೂರ್ತಿ ಹೇಳಿದರು.

ತಾಲ್ಲೂಕು ಮಟ್ಟದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಚ್ಯಪ್ರಜ್ಞಾ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರಿನ ಪ್ರಾಚ್ಯ ಪ್ರಜ್ಞಾ ಇಲಾಖೆಯ ಉಪನಿರ್ದೇಶಕರ ಆದೇಶದಂತೆ, ಪ್ರತಿವರ್ಷ ಪ್ರಾಚ್ಯ ಪ್ರಜ್ಞಾ ಕಾರ್ಯಕ್ರಮದಡಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಾಥಮಿಕ ಶಾಲೆಯ ಮಕ್ಕಳಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳವರೆಗೆ ಎಲ್ಲರೂ ಹಳೆಕಾಲದ ವಸ್ತುಗಳನ್ನು ಗಮನಿಸಿ ಜೋಪಾನವಾಗಿ ತೆಗೆದಿಟ್ಟುಕೊಳ್ಳಬೇಕು. ಸ್ಮಾರಕಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಪ್ರಾಚ್ಯ ಪ್ರಜ್ಞಾ ಕಾರ್ಯಕ್ರಮದ ನೋಡಲ್ ಅಧಿಕಾರಿ ರಂಗಪ್ಪ ಮಾತನಾಡಿ, ತಾಲ್ಲೂಕು ಮಟ್ಟದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮವನ್ನು ತಾಲ್ಲೂಕಿನ 17 ಸರ್ಕಾರಿ ಪ್ರೌಢಶಾಲೆ ಹಾಗೂ ಅನುದಾನಿತ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಇದರಲ್ಲಿ ರಸಪ್ರಶ್ನೆ, ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆ ನಡೆಸಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುವುದು. 12 ತೀರ್ಪುಗಾರರು ತೀರ್ಪು ನೀಡಲಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ನಾಗರಾಜ್ ಮಾತನಾಡಿ, ಪ್ರಾಚೀನ ವಸ್ತುಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ತಿಳಿದುಕೊಳ್ಳುವುದರ ಜತೆಗೆ ಹಳೆವಸ್ತುಗಳು, ಪ್ರಾಚೀನ ವಸ್ತುಗಳನ್ನು ನೇರವಾಗಿ ನೋಡುವುದರಿಂದ ಪ್ರಾಚ್ಯವಸ್ತುಗಳ ಬಗ್ಗೆ ಹೆಚ್ಚು ಜ್ಞಾನ ಬರುತ್ತದೆ ಎಂದರು.

ಇಸಿಒ ಸಂಗೀತಾ, ಬಿಆರ್‌ಪಿ ರಾಜನಾಯ್ಕ, ಸಿಆರ್‌ಪಿ ಓಂಕಾರಪ್ಪ, ಗ್ರಾಮೀಣ ಭಾಗದ ಸಿಆರ್‌ಪಿ ದೇವರಾಜ್, ಬಿಆರ್‌ಪಿ ವಿಜಯಕುಮಾರ್, ನಗರ ವ್ಯಾಪ್ತಿಯ ಸಿಆರ್‌ಪಿ ಅನಂತಪ್ಪ, ಭಾಗ್ಯ, ಜಿ.ಎನ್. ಅಪೂರ್ವ, ಸುಹಾಸಿನಿ ಇದ್ದರು. ಚಿತ್ರಕಲೆ, ಭಾಷಣ, ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT