ತರೀಕೆರೆ: ಮಾಜಿ ಪ್ರಧಾನಿ ಬಾಬು ಜಗಜೀವನರಾಂ ಅವರ ತತ್ವ ಮತ್ತು ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದು ತಹಶೀಲ್ದಾರ್ ರಶ್ಮಿ ಎಚ್.ಜೆ. ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಾಬು ಜಗಜೀವನ ರಾಂ ಅವರ119ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಾಬೂಜಿಯವರು ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ಸಾಮಾಜಿಕ ಅಸಮಾನತೆಯ ಕಹಿ ನೋವು ಅನುಭವಿಸಿ ಮೇಲೆ ಬಂದವರು. ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ತಮ್ಮದೇ ಆದ ಸಂಘಟನೆಯ ಮೂಲಕ ದಲಿತ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು ಎಂದರು.

ಸಭೆಯಲ್ಲಿ ಮುಖಂಡ ಎಂ.ನರೇಂದ್ರ ಮಾತನಾಡಿ, ಬಾಬೂಜಿ ಅವರ ಜನ್ಮ ದಿನವನ್ನು ದೇಶ ‘ಸಮತಾ ದಿವಸ್’ ಎಂದು ಆಚರಿಸುತ್ತಿದೆ. ಪ್ರಾರಂಭದಲ್ಲಿ ಅಸಮಾನತೆಯನ್ನು ಅನುಭವಿಸಿದ ಅವರು ಮುಂದೆ ಹಲವಾರು ಹೋರಾಟಗಳನ್ನು ಮಾಡಿ ಪ್ರಜಾಪ್ರಭುತ್ವದ ಮೂಲಕ ಬದುಕಿನ ದಾರಿ ತೋರಿಸಿದರು ಎಂದರು.

ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರ ಭವಿಷ್ಯ ಭದ್ರಗೊಳಿಸಲು ಕಾರ್ಮಿಕ ಕಲ್ಯಾಣ ನೀತಿಗಳನ್ನು ಜಾರಿಗೊಳಿಸಿದರು. ಕೃಷಿ ಸಚಿವರಾಗಿದ್ದಾಗ ಕೃಷಿ ರಂಗದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೊಂಡು ಕೃಷಿ ಕ್ರಾಂತಿ ಮಾಡಿ ಹಸಿರು ಕ್ರಾಂತಿ ಹರಿಕಾರ ಎಂದು ಹೆಸರು ಪಡೆದರು. ಇದೇ ರೀತಿ ದೇಶದ ಮೊದಲ ಉಪ ಪ್ರಧಾನಿಯೂ ಆಗಿ, ದೇಶಕ್ಕೆ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಸಮಾಜದಿಂದ ನಾವು ಬದಲಾಗುವುದಿಲ್ಲ. ನಮ್ಮಿಂದ ಸಮಾಜ ಬದಲಾಗಬೇಕು ಎಂದು ನಂಬಿಕೆ ಇಟ್ಟಿದ್ದರು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿದರು.ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಂಘಟನೆಯ ಮಖಂಡರು ಭಾಗವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಲಿಂಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-126-848156293

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.