ತರೀಕೆರೆ: ತಾಲ್ಲೂಕಿನ ಕೆಂಚಾಪುರ ಗ್ರಾಮ ದೇವರಾದ ಹನುಮಂತ ದೇವರ ದಿವ್ಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಿತು.

ಯಳನಾಡು ಮಹಾಸಂಸ್ಥಾನದ ಮಠಾಧೀಶ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಆಶೀರ್ಚನ ನೀಡಿ, ಕೆಂಚಾಪುರ ಗ್ರಾಮ, ಗುಳ್ಳದ ಮನೆ, ಕೆಂಚಾಪುರ ಗೇಟ್, ಮಲ್ಲೇನಹಳ್ಳಿ, ಮಲ್ಲಿಗೇನಹಳ್ಳಿ ಮೊದಲಾದ ಗ್ರಾಮಗಳ ಭಕ್ತರ ಸಹಕಾರದಿಂದ ಬ್ರಹ್ಮ ರಥೋತ್ಸವ ನಡೆಯುತ್ತಿದೆ. ಸ್ವಾಮಿಯ ಆಶೀರ್ವಾದದಿಂದ ಮುಂಬರುವ ದಿನಗಳಲ್ಲಿ ನಾಡಿನೆಲ್ಲಡೆ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.

ಇಂದು ದೇಶಗಳ ನಡುವೆ ಅಧರ್ಮ ಯುದ್ಧಗಳು ನಡೆಯುತ್ತಿದ್ದು, ಇದರಿಂದ ವಿಶ್ವದ ಎಲ್ಲರಿಗೂ ಅನರ್ಥಗಳಾಗುತ್ತಿದೆ. ಪ್ರತಿಯೊಬ್ಬರೂ ಸರ್ವಧರ್ಮ ಸಮನ್ವಯದಿಂದ ಕೂಡಿರುವಂತೆ ಹನುಮಂತ ದೇವರು, ಗ್ರಾಮ ದೇವತೆ ಕೊಲ್ಲಾಪುರದಮ್ಮ ದೇವಿ ಆಶೀರ್ವದಿಸಲಿ ಎಂದು ಹೇಳಿದರು.

ಹನುಮಂತ ದೇವರ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ನೆರೆದಿದ್ದ ನೂರಾರು ಭಕ್ತರು ತಾವು ಬೆಳೆದಿದ್ದ ರಾಗಿ, ಭತ್ತ, ದ್ವಿದಳ ಧಾನ್ಯ, ಬಾಳೆ ಹಣ್ಣು, ಮಂಗಳ ದ್ರವ್ಯಗಳನ್ನು ರಥಕ್ಕೆ ಎಸೆಯುವ ಮೂಲಕ ಹರಕೆ ಅರ್ಪಿಸಿದರು.

ದೇವಾಲಯ ಸೇವಾ ಸಮಿತಿ ಪದಾಧಿಕಾರಿಗಳಾದ ಕೆ.ಎ. ಚಂದ್ರಪ್ಪ, ಮೋಹನ್ ಕುಮಾರ್, ಕೆ.ಎಸ್. ಮನು, ಕೆ.ಬಿ. ವಿರೂಪಾಕ್ಷ, ಕೆ.ಜಿ. ದರ್ಶನ್, ಇ. ರಘು, ವೆಂಕಟೇಶ್ ಪಾಲ್ಗೊಂಡಿದ್ದರು.

ಹನುಮಂತ ದೇವರ ಅವತಾರವೆಂದೇ ಭಾವಿಸಿ ಪೂಜೆ ಸಲ್ಲಿಸಲು ಅವಕಾಶ ಹೊಂದಿರುವ ದೇವರ ಬೆಳ್ಳಿ ಬಾವುಟ, ಪೂಜಾ ಸಾಮಾಗ್ರಿಯ ಬಹಿರಂಗ ಹರಾಜು ನಡೆಯಿತು.

ಕೆಂಚಾಪುರ ಗ್ರಾಮಸ್ಥರಾದ ಲೋಕೇಶ್ ನಾಯ್ಕ ಮತ್ತು ಕುಟುಂಬಸ್ಥರು ₹1.65 ಲಕ್ಷಕ್ಕೆ ಹರಾಜು ಕೂಗುವ ಮೂಲಕ ಬೆಳ್ಳಿ ಬಾವುಟ ತಮ್ಮದಾಗಿಸಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-126-584037915

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.