ತರೀಕೆರೆ: ಪುರಸಭೆ ವತಿಯಿಂದ ಮಲತ್ಯಾಜ್ಯ ಸಂಗ್ರಹಣೆ ಸಕ್ಕಿಂಗ್ ಯಂತ್ರ ವಾಹನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಪುರಸಭೆಯ 2024–25ನೇ ಸಾಲಿನ 15ನೇ ಹಣಕಾಸು ಯೋಜನೆಯ ನಿರ್ಬಂಧಿತ ಅನುದಾನದಲ್ಲಿ ₹44.95 ಲಕ್ಷ ವೆಚ್ಚದ ಹೈಡ್ರಾಲಿಕ್ ರೆಪ್ಯೂಸ್ ಕಂಪ್ಯಾಕ್ಟರ್ ಯಂತ್ರವುಳ್ಳ ವಾಹನ ಹಾಗೂ 15ನೇ ಹಣಕಾಸಿನ ಎನ್ಎಂಪಿಸಿ ಅನುದಾನದಡಿ ₹31 ಲಕ್ಷ ವೆಚ್ಚದ ಮಲತ್ಯಾಜ್ಯ ಸಂಗ್ರಹಣೆ ಸಕ್ಕಿಂಗ್ ಯಂತ್ರ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪಟ್ಟಣದಲ್ಲಿ ನಿತ್ಯ ಕಸ ಸಂಗ್ರಹಣೆಗೆ ಈಗಾಗಲೇ 13 ವಾಹನಗಳಿದ್ದು, ಹೈಡ್ರಾಲಿಕ್ ರೆಪ್ಯೂಸ್ ಕಂಪ್ಯಾಕ್ಟರ್ ಯಂತ್ರದ ನೆರವಿನಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಒಂದೇ ಸ್ಥಳದಲ್ಲಿ ಸಂಕುಚಿತಗೊಳಿಸಬಹುದಾಗಿದೆ. ಇದರಿಂದ ಕಸ ಸಾಗಿಸುವ ಟಿಪ್ಪರ್ ಮತ್ತು ಟ್ರ್ಯಾಕ್ಟರ್ಗಳು ಕಂಪೋಸ್ಟ್ ಯಾರ್ಡ್ವರೆಗೆ ಸಂಚರಿಸುವ ಅಗತ್ಯ ಕಡಿಮೆಯಾಗಿದ್ದು, ಇಂಧನ ವೆಚ್ಚವೂ ಉಳಿತಾಯವಾಗಲಿದೆ ಎಂದರು.

ಮಲತ್ಯಾಜ್ಯ ಸಂಗ್ರಹಣೆಯ ಸಕ್ಕಿಂಗ್ ಯಂತ್ರ ವಾಹನವನ್ನು ಪ್ರತಿ ಟ್ಯಾಂಕರ್ಗೆ ₹2 ಸಾವಿರ ಬಾಡಿಗೆಯಲ್ಲಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪುರಸಭೆಗೆ ಮುಕ್ತ ವಾಹನದ ಅಗತ್ಯವಿದೆ. ಪುರಸಭೆ ನೂತನ ಕಟ್ಟಡ ಶಂಕುಸ್ಥಾಪನೆ, ತಾಯಿ–ಮಗು ಆಸ್ಪತ್ರೆ ಹಾಗೂ ಎನ್ಎಚ್–206 ರಸ್ತೆ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿಯನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್, ಸದಸ್ಯರಾದ ಗಿರಿಜಾ ಪ್ರಕಾಶ್, ಅನಿಲ್ ಕುಮಾರ್, ಚಂದ್ರಶೇಖರ್, ಕುಮಾರ್, ಗಿರಿಜಾ ಪ್ರಕಾಶ್ ವರ್ಮ, ಮಂಜುನಾಥ್, ಆದಿಲ್ ಪಾಷಾ, ಮುಖಂಡರಾದ ಗಿರಿರಾಜ್, ರಾಘವೇಂದ್ರ, ಅಣ್ಣಯ್ಯ, ಮುಖ್ಯಾಧಿಕಾರಿ ತಾಹೀರಾ ತಸ್ನೀಮ್, ಅಧಿಕಾರಿ ಪ್ರಸನ್ನ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-126-864245509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.