ತರೀಕೆರೆ: ‘ಮುಖಂಡ ಟಿ.ಜಿ. ಗೋಪಿಕುಮಾರ್ ಅವರು ಬಡವರು, ಕಾರ್ಮಿಕರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿದ್ದು, ಅವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ’ ಎಂದು ಟಿ.ವಿ. ಶಿವಶಂಕರಪ್ಪ ಹೇಳಿದ್ದಾರೆ.

ತರೀಕೆರೆ ಆಟೊ ಚಾಲಕರು ಮತ್ತು ಮಾಲೀಕರ ಸಂಘ, ಸರ್ವಧರ್ಮ ಸಮನ್ವಯ ಬಳಗದಿಂದ ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ ನಡೆದ ಟಿ.ಜೆ. ಗೋಪಿಕುಮಾರ್ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ ಮಾತನಾಡಿ, ‘ಟಿ.ಎಲ್. ಜ್ಞಾನದೇವರಾವ್ ಅವರ ಅಂಚೆ ಕುಟುಂಬ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಶ್ರಮಿಸುತ್ತಿದೆ. ಅಹಿಂದ ವರ್ಗದವರೊಡನೆ ಅವಿನಾಭಾವ ಸಂಬಂಧ ಹೊಂದಿದ್ದಾರೆ’ ಎಂದರು.

ಸಾಹಿತಿ ಮನಸುಳಿ ಮೋಹನ್ ಕುಮಾರ್ ಮಾತನಾಡಿ ದರು. ಗೋಪಿಕು ಮಾರ್ ಅವರು ಶುಭಕೋರಿದವರಿಗೆ ಕೃತಜ್ಞತೆ ಅರ್ಪಿಸಿದರು. ಪುರಸಭೆ ಸದಸ್ಯ ಟಿ.ಎಂ. ಬೋಜರಾಜ್, ಮುಖಂಡರಾದ ದೋರನಾಳು ಲಿಂಗಮೂರ್ತಿ, ಪುರಸಭಾ ಮಾಜಿ ಉಪಾಧ್ಯಕ್ಷ ಟಿ.ಎಲ್. ಕೃಷ್ಣಮೂರ್ತಿ (ಕಿಟ್ಟಯ್ಯ), ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಟಿ.ಎನ್. ಜಗದೀಶ್, ರಕ್ಷಣಾ ವೇದಿಕೆಯ ರಮೇಶ್, ವಕೀಲ ಇರ್ಫಾನ್ ಅಹಮದ್ ಬೇಗ್, ಪುರಸಭಾ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ಪತ್ರಕರ್ತ ಎಸ್.ಕೆ. ಸ್ವಾಮಿ ಮಾತನಾಡಿದರು.

ಪುರಸಭೆ ಸದಸ್ಯ ಚೇತನ್, ಕುಮಾರಪ್ಪ, ಟಿ.ಎಚ್. ಸತ್ಯನಾರಾಯಣ, ಪುರಸಭಾ ಮಾಜಿ ಅಧ್ಯಕ್ಷ ಟಿ.ಆರ್. ನಾಗರಾಜ್, ಸುರೇಶ್, ಜಯಣ್ಣ, ಟಿ.ಎಚ್. ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-126-1139746652

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.