ತರೀಕೆರೆ: ಪಟ್ಟಣದ ಆಡಳಿತ ವೈದ್ಯಾಧಿಕಾರಿಯು ಕಚೇರಿ ಕೆಲಸದಲ್ಲಿ ನಿರತರಾಗಿರುವುದರಿಂದ ರೋಗಿಗಳು ತೊಂದರೆಗೀಡಾಗಿದ್ದು, ಆ ಸ್ಥಾನಕ್ಕೆ ತಜ್ಞ ವೈದ್ಯರಲ್ಲದವರನ್ನು ನೇಮಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಪುರಸಭೆ ಸದಸ್ಯ ಟಿ. ದಾದಾಪೀರ್ ಒತ್ತಾಯಿಸಿದ್ದಾರೆ.

ವೈದ್ಯಾಧಿಕಾರಿ ಕೆಡಿಪಿ ಸಭೆ, ಕಚೇರಿ ಸಿಬ್ಬಂದಿಯ ಸಭೆ, ವಿಡಿಯೊ ಕಾನ್ಫರೆನ್ಸ್, ಕಡತಗಳ ಪರಿಶೀಲನೆ ಹಾಗೂ ಇಲಾಖೆಯ ಕೆಲಸಗಳಲ್ಲಿ ತೊಡಗುತ್ತಿರುವುದರಿಂದ ಹೊರ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿ ಖಾಸಗಿ ಆಸ್ಪತೆಗಳಲ್ಲೂ ಕಿವಿ, ಮೂಗು ಮತ್ತು ಗಂಟಲು ರೋಗ ವಿಭಾಗದ ವೈದ್ಯರು ಇಲ್ಲದಿರುವ ಕಾರಣ ರೋಗಿಗಳು ಬೇರೆ ಪಟ್ಟಣಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿ ಕೆಲಸಗಳನ್ನು ನಿಭಾಯಿಸಲು ವೈದ್ಯರು ಪರದಾಡುತ್ತಿದ್ದು, ರೋಗಿಗಳಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಅವರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-126-784086050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.