ತರೀಕೆರೆ: ಪಟ್ಟಣದ ಎಚ್.ಎಸ್.ಎಸ್. ಶೇಕುಲ್ ಇಸ್ಲಾಂ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ನಡೆಯಿತು.

ಉತ್ತರ ಪ್ರದೇಶದ ಕಚೋಚ ಷರೀಫ್ ಅಧ್ಯಾತ್ಮ ಕೇಂದ್ರದ ಹಜ್ರತ್ ಖಾಸಿಂ ಅಶ್ರಫ್ ಜೀಲಾನಿ ಮಾತನಾಡಿ, ಮದುವೆಗಳನ್ನು ಇಸ್ಲಾಂ ಸರಳಗೊಳಿಸಿದೆ. ಇದರಿಂದಾಗಿ ಬಡ ಕುಟುಂಬದ ಹೆಣ್ಣು ಮಕ್ಕಳು ದಾಂಪತ್ಯ ಜೀವನ ನಡೆಸಬಹುದಾಗಿದೆ. ಅದ್ಧೂರಿ ಮದುವೆಗಳಿಂದ ದೂರ ಇರುವಂತೆ ಇಸ್ಲಾಂ ಮಾರ್ಗದರ್ಶನ ಮಾಡಿದ್ದು, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪತಿ ಹಾಗೂ ಪತ್ನಿ ಪರಸ್ಪರ ಕ್ಷಮೆ ಹಾಗೂ ಪ್ರೀತಿಯಿಂದ ದಾಂಪತ್ಯ ಕಲಹವನ್ನು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹುಬ್ಬಳ್ಳಿಯ ಮದನಿ ಮಿಯಾ ಅರೆಬಿಕ್ ಕಾಲೇಜಿನ ಹಜ್ರತ್ ನಿಸಾರ್ ಅಹಮದ್ ಮಿಸ್ಬಾಯಿ ಮಾತನಾಡಿ, ಸಾಮೂಹಿಕ ವಿವಾಹಗಳು ಇಸ್ಲಾಂನ ಆದರ್ಶಗಳಾಗಿದ್ದು, ಇಂಥ ಕಾರ್ಯಕ್ರಮಗಳು ದೇವರಲ್ಲಿ ಪ್ರೀತಿ ತರುತ್ತವೆ ಎಂದು ಹೇಳಿದರು.

ನೂತನ ವಧುವರರಿಗೆ ಅಗತ್ಯ ವಸ್ತುಗಳು ಸೇರಿದಂತೆ 5 ಗ್ರಾಂ ಚಿನ್ನದ ಉಡುಗೊರೆಗಳನ್ನು ನೀಡಲಾಯಿತು.

ಪಟ್ಟಣದ ಮಸೀದಿಗಳ ಮೌಲಾನ ಜಬೀಉಲ್ಲಾ ಖಾನ್ ನಿಜಾಮಿ, ಅಖಿಲ್ ರಜಾ, ಸಕ್ಲೇನ್, ಮುಹಮ್ಮದ್ ಅಹ್ಮದ್ ಅಲಿ, ಶೇಕುಲ್ ಇಸ್ಲಾಂ ಟ್ರಸ್ಟ್ನ ಮೊಹಮ್ಮದ್ ಜಾಫರ್ ಸಾದೀಕ್, ಅಫ್ರೋಜ್, ಎಜಾಜ್, ಮುತಾಹಿರ್, ಷಹಾಬುದ್ದೀನ್, ನೌಷಾದ್, ಇಸ್ಮಾಯಿಲ್, ಪದಾಧಿಕಾರಿಗಳು, ವಾಣಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಜೆ. ಗೋಪಿಕುಮಾರ್, ಎಂ.ನರೇಂದ್ರ, ಉಮ್ಮರ್ ಫಾರೂಕ್, ಪ್ರಕಾಶ್ ವರ್ಮಾ, ಪುರಸಭೆ ಸದಸ್ಯರಾದ ಟಿ.ದಾದಾಪೀರ್, ಶಮೀಂ ಭಾನು, ಅಬ್ಬಾಸ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-126-177249634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.