ತರೀಕೆರೆ: ಪಟ್ಟಣದ ಶ್ರೀಸತ್ಯಪ್ರದ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದ ಟ್ರಸ್ಟ್ ದಶಮಾನೋತ್ಸವ ಪ್ರಯುಕ್ತ ಶ್ರೀಸತ್ಯಪ್ರದ ಲಕ್ಷ್ಮಿವೆಂಕಟೇಶ್ವರ ಸ್ವಾಮಿಯ ಗರುಡೋತ್ಸವವು ವಿವಿಧ ವೇಷಭೂಷಣ, ಚಂಡೆ ತಾಳ, ಡೋಲು ವಾದ್ಯದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ಎಲ್ಲಾ ಭಜನಾ ಮಂಡಳಿಯ ಸದಸ್ಯೆಯರು ಹಾಗೂ ಭಕ್ತ ಮಂಡಳಿಯಿಂದ ಗುರುವಾರ ಬೆಳಿಗ್ಗೆಯಿಂದ ನಗರ ಸಂಕೀರ್ತನೆ, ಸುಪ್ರಭಾತ ಸೇವೆ ನಡೆದವು. ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಪುಷ್ಪ ಅಲಂಕಾರ, ಪೂಜಾ ಕೈಂಕರ್ಯಗಳನ್ನು ಯತಿರಾಜು ಭಟ್ ನೆರವೇರಿಸಿಕೊಟ್ಟರು.

ಧಾರ್ಮಿಕ ಸಮಾರಂಭದಲ್ಲಿ ಪ್ರವಚನ ನೀಡಿದ ಬ್ರಹ್ಮಣ್ಯಾಚಾರ್ಯ, ‘ಜೀವನದಲ್ಲಿ ಅಹಂಕಾರ, ಮಮಕಾರದಿಂದ ಸಾವಿರಾರು ತಪ್ಪುಗಳನ್ನು ಮಾಡುತ್ತೇವೆ. ಸತ್ಯದಿಂದ ಭಗವಂತನ ದರ್ಶನ ಮಾಡಿದರೆ, ಎಲ್ಲಾ ಪಾಪಗಳು ಮರೆಯಾಗುತ್ತವೆ. ದಾನ ಮಾಡುವಾಗ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಹಾಗೇ ದಾನ ಮಾಡಬೇಕು. ಸಮರ್ಥವಾಗಿ ಕೊಡುವ ಭಾವನೆ ಇರುವುದು ತಾಯಿಗೆ ಮಾತ್ರ. ತಾಯಿ ಬಿಟ್ಟರೆ ಜಗತ್ತಿನಲ್ಲಿ ಯಾರೂ ಇಲ್ಲ. ತಾಯಿಯ ಋಣ ತೀರಿಸಲು ಏಳೇಳು ಜನ್ಮಕ್ಕೂ ಸಾಧ್ಯವಿಲ್ಲ’ ಎಂದರು.

ಭಕ್ತರಿಗೆ ಶ್ರೀಗಳು ಫಲ–ಮಂತ್ರಾಕ್ಷತೆ ನೀಡಿದರು. ಸಂಜೆ ಶ್ರೀಪದ್ಮಾವತಿ ಸಮೇತ ಶ್ರೀಲಕ್ಷ್ಮಿವೆಂಕಟೇಶ್ವರ ಸ್ವಾಮಿಯ ಗರುಡೋತ್ಸವ ಮೆರವಣಿಗೆಯು ರಾಜ ಬೀದಿಯಲ್ಲಿ ಸಾಗಿ, ಗ್ರಾಮ ದೇವತೆ ಸಾಲುಮರದಮ್ಮ ದೇವಾಲಯ ತಲುಪಿ, ನಂತರ ಸ್ವಸ್ಥಳಕ್ಕೆ ತರಲಾಯಿತು.

ಪ್ರತಿಯೊಂದು ಭಜನಾ ಮಂಡಳಿಗಳು, ಯಕ್ಷಗಾನ ಹಾಗೂ ಮಕ್ಕಳ ವೇಷಭೂಷಣ ಗಮನ ಸೆಳೆದವು. ದೇವಾಲಯಕ್ಕೆ ಸೇವೆ ಸಲ್ಲಿಸಿದ 50ಕ್ಕೂ ಹೆಚ್ಚು ಗಣ್ಯರಿಗೆ ನೆನಪಿನ ಕಾಣಿಕೆ, ಶಾಲು ಹೊಂದಿಸಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-126-795016608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.