ತರೀಕೆರೆ: ಪಟ್ಟಣದ ಶ್ರೀಸತ್ಯಪ್ರದ ಲಕ್ಷ್ಮಿವೆಂಕಟೇಶ್ವರ ದೇವಾಲಯದ ದಶಮಾನೋತ್ಸವ ಸಮಾರಂಭ ಏ. 2ರಂದು ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷೆ ಬಿ.ಎಸ್. ಶೋಭಾ ತಿಳಿಸಿದರು.

ದೇವಸ್ಥಾನದ ಟ್ರಸ್ಟ್, ನಗರದ ಎಲ್ಲ ಭಜನಾ ಮಂಡಳಿ ಮಾತೆಯರು ಹಾಗೂ ಭಕ್ತ ಮಂಡಳಿಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ದೇವಾಲಯದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. ಬೆಳಿಗ್ಗೆ 5.30ರಿಂದ 6ರವರಿಗೆ ಸುಪ್ರಭಾತ ಸೇವೆ, 6ರಿಂದ 8ರವರೆಗೆ ಅಭಿಷೇಕ, ರಜತ ಕವಚ ಧಾರಣೆ, ತೋಮಲ ಸೇವೆ, ಹೂವಿನ ಅಲಂಕಾರ, 8ರಿಂದ 10ರವರೆಗೆ ಸಹಸ್ರ ಮೋದಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬೆಳಿಗ್ಗೆ 10ರಿಂದ 12ರವರೆಗೆ ಬ್ರಹ್ಮಣ್ಯಾಚಾರ್ಯ ಅವರಿಂದ ಪ್ರವಚನ, ನಂತರ ಶ್ರೀಗಳಿಂದ ಫಲ, ಮಂತ್ರಾಕ್ಷತೆ ನೀಡುವ ಕಾರ್ಯಕ್ರಮ. ಭಕ್ತಾದಿಗಳಿಗೆ ಪ್ರಸಾದ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ಸಂಜೆ 4ಕ್ಕೆ ಶ್ರೀಪದ್ಮಾವತಿ ಸಮೇತ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಗರುಡೋತ್ಸವ ಮೆರವಣಿಗೆ ಅಣ್ಣಪ್ಪ ಬೀದಿಯ ಮಾರ್ಗವಾಗಿ ವಾಸವಿ ದೇವಾಲಯ, ಕಾಳಿದಾಸ ನಗರ, ಶ್ರೀರೇವಣಸಿದ್ದೇಶ್ವರ ಸ್ವಾಮಿಯ ದೇವಾಲಯ, ದೊಡ್ಡಯ್ಯನ ಬೀದಿ, ಮುಂದೆ ಬಲಭಾಗಕ್ಕೆ ತಿರುಗಿ ಬಸವೇಶ್ವರ ಬೀದಿ, ಶಾರದಾಂಬೆ ದೇವಾಲಯ, ಗ್ರಾಮದೇವತೆ ಸಾಲುಮರದಮ್ಮ ದೇವಾಲಯ ನಂತರ ಸ್ವಸ್ಥಳಕ್ಕೆ ಬರುವುದು. ವಿವಿಧ ಕಲಾ ವೃಂದ, ಭಜನಾ ಮಂಡಳಿ ಹಾಗೂ ಭಕ್ತ ವೃಂದದಿಂದ ವೇಷಭೂಷಣ, ಯಕ್ಷಗಾನ, ಕೋಲಾಟ, 111 ದಾಸಯ್ಯನವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-126-835391736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.