ತರೀಕೆರೆ: ಪಟ್ಟಣದ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗೆ (ಪಿಕಾರ್ಡ್) ನೂತನ ಅಧ್ಯಕ್ಷರಾಗಿ ಕಿರಣ್ ಕುಮಾರ್ ಎಚ್.ಎಂ. ಅವಿರೋಧವಾಗಿ ಆಯ್ಕೆಯಾದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ‘ಎಲ್ಲರ ಸಹಕಾರ ಮತ್ತು ಸಲಹೆಗಳನ್ನು ಪಡೆದು ಬ್ಯಾಂಕ್ನ ಅಭಿವೃದ್ಧಿ ಕೆಲಸಗಳನ್ನು ನಡೆಸಿಕೊಂಡು ಹೋಗುತ್ತೇನೆ’ ಎಂದರು.

ಪ್ರಸಕ್ತ ಸಾಲಿನಲ್ಲಿ 173 ರೈತರಿಗೆ ₹7.92 ಕೋಟಿ ಸಾಲವನ್ನು ಮೊದಲ ಕಂತಿನಲ್ಲಿ ವಿತರಿಸಲಾಗಿದೆ. ಉಳಿದ ₹2.28 ಕೋಟಿ ಸಾಲವನ್ನು 2ನೇ ಕಂತಿನಲ್ಲಿ ವಿತರಿಸಲಾಗುವುದು. ಇದಲ್ಲದೆ ಇನ್ನು ಹೆಚ್ಚುವರಿ ಸಾಲಕ್ಕೆ ಮನವಿ ಸಲ್ಲಿಸಲಾಗಿದ್ದು, ಮಂಜೂರಾದ ತಕ್ಷಣ ಇನ್ನುಳಿದ ರೈತರಿಗೂ ಸಾಲ ವಿತರಿಸಲಾಗುವುದು. ಬ್ಯಾಂಕ್ನ ಹಳೆ ಕಟ್ಟಡ ಶಿಥಿಲಗೊಂಡಿದ್ದು, ಮುಂದಿನ ದಿನಗಳಲ್ಲಿ ವಾಣಿಜ್ಯ ಮಳಿಗೆಗಳನ್ನೊಳಗೊಂಡ ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್ ಮಾತನಾಡಿ, ‘1952ರಲ್ಲಿ ಹಂಜಿ ಶಿವಣ್ಣನವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ತಾಲ್ಲೂಕಿನ ನೂರಾರು ರೈತರಿಗೆ ಸಾಲ ಮತ್ತಿತರೆ ಸೌಲಭ್ಯ ನೀಡುತ್ತಾ ಬಂದಿದ್ದು, 1978ರಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. 1987-88ರಿಂದ ಸಾಲ ಮನ್ನಾ ಯೋಜನೆಗಳಿಂದ ರೈತರ ಮತ್ತು ಬ್ಯಾಂಕ್ನ ನಡುವೆ ಅಂತರ ಕಡಿತಗೊಂಡಿದ್ದರಿಂದ ಬ್ಯಾಂಕ್ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುವಂತಾಯಿತು’ ಎಂದರು.

ಎ.ಎಂ. ಯೋಗೀಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕಿರಣ್ ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುನಂದಮ್ಮ ಘೋಷಿಸಿದರು.

ಬ್ಯಾಂಕ್ನ ಉಪಾಧ್ಯಕ್ಷ ಸಿ.ಎಚ್. ದಿವಾಕರ್, ನಿರ್ದೇಶಕರಾದ ಎ.ಎಂ. ಯೋಗೀಶ್, ಎಚ್.ಆರ್. ನಾಗರಾಜ್, ನಂಜುಂಡಪ್ಪ, ಬಿ. ಪ್ರೀತಂ, ಕೆ. ಚಂದ್ರಶೇಖರಪ್ಪ, ಬಿ.ಎಸ್. ಹಾಲಸಿದ್ದಪ್ಪ, ಆರ್. ತಮ್ಮಯ್ಯ, ಬಿ.ಎಸ್. ನಾಗರಾಜ್, ಪ್ರಭಾರಿ ವ್ಯವಸ್ಥಾಪಕ ಎ.ಎಂ. ಯೋಗೀಶ್, ಲೆಕ್ಕಿಗ ಜೆ.ಎ. ಗೌತಮ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-126-399719125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.