ತರೀಕೆರೆ: ‘ಅಧಿಕಾರಿಗಳು ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಕೈಗೊಂಬೆಗಳಾಗಿದ್ದು, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಮುಖಂಡ ಡಿ.ಎಸ್. ಸುರೇಶ್ ಆರೋಪಿದರು.

ಪಟ್ಟಣದ ಗಾಂಧಿ ವೃತ್ತದ ಬಳಿ ಸೋಮವಾರ ನಾಗರಿಕ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಪೊಲೀಸ್ ನಿರೀಕ್ಷಕರ ದೌರ್ಜನ್ಯ ಖಂಡಿಸಿ, ಕಳಪೆ ಕಾಮಗಾರಿಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅನ್ಯಾಯ ಖಂಡಿಸಿದವರ ಮೇಲೆ ಪೊಲೀಸ್ ಇಲಾಖೆ ಬಳಸಿಕೊಂಡು ಬೆದರಿಸುವ, ದೌರ್ಜನ್ಯ ಎಸಗುವ ಕೆಲಸ ನಡೆಯುತ್ತಿದೆ. ಮೌಲಾನ ಆಜಾದ್ ಸರ್ಕಾರಿ ಶಾಲೆಯ ಕಟ್ಟಡ ಕಾಮಗಾರಿಯ ಕಳಪೆ ಕಾಮಗಾರಿಯನ್ನು ಖಂಡಿಸಿದ್ದಕ್ಕೆ ಪುರಸಭೆ ಸದಸ್ಯ ಟಿ.ಎಂ. ಭೋಜರಾಜ್ ಮೇಲೆ ಪೊಲೀಸ್ ಅಧಿಕಾರಿ ದಬ್ಬಾಳಿಕೆ ನಡೆಸಿದ್ದಾರೆ ಎಂದರು.

ಪಟ್ಟಣದ ಮುಖ್ಯರಸ್ತೆಯ ಕಾಮಗಾರಿ ನಡೆಯುವ ಸಂದರ್ಭದಲ್ಲಿ ತೆರವುಗೊಳಿಸಿದ ವಿದ್ಯುತ್ ಕಂಬಗಳಲ್ಲಿದ್ದ ಕಾಪರ್ ವೈರ್ಗಳು ಏನಾದವು, ಎಲ್ಲಿಗೆ ಹೋದವು ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕ್ಷೇತ್ರದಾದ್ಯಂತ ಮದ್ಯದ ಅಂಗಡಿಗಳು ತಲೆ ಎತ್ತುತ್ತಿದ್ದು, ಮದ್ಯ ಮಾರಾಟ ಯಾರ ಭಯವಿಲ್ಲದೆ ಕಾನೂನು ಮೀರಿ ನಡೆಯುತ್ತಿದೆ. ಇದರಲ್ಲಿ ಶಾಸಕರ ಪಾಲುದಾರಿಕೆಯೂ ಇದೆ ಎಂದರು.

ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್. ರಮೇಶ್ ಮಾತನಾಡಿ, ಶಾಸಕರ ಕುಟುಂಬದವರು ಕೂಡ ಅಧಿಕಾರ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಕೈಗೊಂಡ ಅನೇಕ ಅಭಿವೃದ್ದಿ ಕಾರ್ಯಗಳನ್ನು ತಮ್ಮದೇ ಅಭಿವೃದ್ದಿ ಎಂದು ಶಾಸಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ವಸೂಲಿ ದಂಧೆಗೆ ಇಳಿದಿದ್ದಾರೆ. ಹಣಕ್ಕಾಗಿ ಅಂದರ್ ಬಾಹರ್ ಆಟ ಆಡಿಸುತ್ತಿದ್ದಾರೆ. ಪ್ರಶ್ನೆ ಮಾಡುವವರ ಧ್ವನಿ ಅಡಗಿಸುವ ಕೆಲಸವನ್ನು ಪೊಲೀಸರಿಂದ ಮಾಡಿಸಲಾಗುತ್ತಿದೆ ಎಂದು ದೂರಿದರು.

ಪುರಸಭೆ ಮಾಜಿ ನಾಮಿನಿ ಸದಸ್ಯೆ ಅರುಂಧತಿ ಜಿ. ಹೆಗಡೆ, ಜಿ.ಪಂ. ಮಾಜಿ ಸದಸ್ಯ ಎಂ. ಕೃಷ್ಣಮೂರ್ತಿ, ಅಜ್ಜಂಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೇವಣ್ಣ ಮಾತನಾಡಿದರು. ಪಟ್ಟಣದ ಮುಖ್ಯರಸ್ತೆಯ ಮೂಲಕ ಮೆರವಣಿಗೆ ನಡೆಸಿ ಗಾಂಧಿ ವೃತ್ತದ ಬಳಿ ಸೇರಿ, ನಂತರ ತಾಲ್ಲೂಕು ಕಚೇರಿಗೆ ತೆರಳಿದ ಪ್ರತಿಭಟನಕಾರರು ಉಪವಿಭಾಗಾಧಿಕಾರಿ ಎನ್.ವಿ. ನಟೇಶ್ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಗುಳ್ಳದಮನೆ ವಸಂತ ಕುಮಾರ್, ರಾಜೇಶ್ವರಿ ರಾಜಶೇಖರ್, ಸದಾನಂದ್, ಹರ್ಷವರ್ಧನ್, ಆನಂದ್, ರೇಣುಕಪ್ಪ, ಸೋಮಶೇಖರ್, ಲೋಹಿತ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-126-436520855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.