ತರೀಕೆರೆ: ಪ್ರತಿಯೊಬ್ಬರೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಧುಮೇಹ ಸೇರಿದಂತೆ ಹಲವು ರೋಗಗಳನ್ನು ನಿಯಂತ್ರಿಸಬಹುದು ಎಂದು ಪುರಸಭಾಧ್ಯಕ್ಷ ವಸಂತಕುಮಾರ್ ಹೇಳಿದರು.

ಪಟ್ಟಣದ ಗಾಳಿಹಳ್ಳಿ ಸಮೀಪದ ಎಸ್ಜೆಎಂ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವಾಲಿಬಾಲ್ ಮಿನಿ ಲೀಗ್ ಟುರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

50 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಕಿರಿಯರು ಒಟ್ಟಾಗಿ ಭಾಗವಹಿಸಿರುವ ಈ ಕ್ರೀಡಾಕೂಟ ವಿಶೇಷವಾಗಿದ್ದು, ಆರೋಗ್ಯದಾಯಕ ಮತ್ತು ಮನರಂಜನಾತ್ಮಕ ಮಿನಿ ವಾಲಿಬಾಲ್ ಟೂರ್ನಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ತರೀಕೆರೆ ಬ್ಲಾಕ್ ಅಧ್ಯಕ್ಷ ಎಚ್.ಯು. ಫಾರೂಕ್ ಮಾತನಾಡಿ, ಇಂತಹ ವಿಶೇಷ ಕ್ರೀಡೆಗಳು ಆರೋಗ್ಯದ ಜೊತೆಗೆ ಸಂತೋಷವನ್ನೂ ನೀಡುತ್ತವೆ. ಇಂತಹ ಕ್ರೀಡಾಕೂಟಗಳನ್ನು ಆಗಾಗ ಆಯೋಜಿಸಿ, ಹಿರಿಯರು ಮತ್ತು ಕಿರಿಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಇನ್ನಷ್ಟು ವಿಜೃಂಭಣೆಯಿಂದ ನಡೆಸಬೇಕು ಎಂದು ಹೇಳಿದರು. ಬಳಿಕ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿದ ಕೆಡಿಪಿ ಸದಸ್ಯೆ ರಚನಾ ಚೇತನ್ ಮಾತನಾಡಿ, ಮಿನಿ ಅಂಕಣದ ಕ್ರೀಡಾಕೂಟಗಳು ವಿಶೇಷ ಅನುಭವ ನೀಡುತ್ತವೆ. ಹಿರಿಯರು ಸಹ ಉತ್ಸಾಹದಿಂದ ಭಾಗವಹಿಸುತ್ತಿರುವುದು ಶ್ಲಾಘನೀಯ. ಇಂದಿನ ಯುವಪೀಳಿಗೆ ಮೊಬೈಲ್ ಫೋನ್ನಿಂದ ದೂರವಿದ್ದು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪುರಸಭೆಯ ಮಾಜಿ ಅಧ್ಯಕ್ಷ ಪ್ರಕಾಶ್ ವರ್ಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಸ್ಲಾಂ ಖಾನ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಬಿ. ರಾಮಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಧರಣೇಶ್, ಸ್ಥಳೀಯ ಮುಖಂಡರಾದ ವೆಂಕಟೇಶ್ ಹಾಗೂ ಗಿರೀಶ್ ಇದ್ದರು.

ಪುರಸಭೆಯ ಮಾಜಿ ಅಧ್ಯಕ್ಷೆ ಪಾರ್ವತಮ್ಮ ತಿಮ್ಮಯ್ಯ ಆಟಗಾರರಿಗೆ ನೆನಪಿನ ಕಾಣಿಕೆ ವಿತರಿಸಿದರು. ಕೃಷಿ ಸಲಹೆಗಾರ ಹಾಗೂ ಮಾಹಿತಿಗಾರ ಪರಶುರಾಮ್ ನೇತೃತ್ವದಲ್ಲಿ ಶಿಕ್ಷಕರಾದ ಶೇಖರಪ್ಪ, ದುಗ್ಗಪ್ಪ, ಅಶೋಕ್ ಕುಮಾರ್, ನಯಾಜ್ ಮತ್ತು ಫಯಾಜ್ ಸಹೋದರರು ಮಿನಿ ಅಂಕಣದ ವಾಲಿಬಾಲ್ ಲೀಗ್ ಟೂರ್ನಿಯನ್ನು ಆಯೋಜಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-126-345176851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.