ತರೀಕೆರೆ: ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಮಾನದಿಂದ ಜನರು ತತ್ತರಿಸುತ್ತಿದ್ದು, ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರು ಹಾಗೂ ಕೃಷಿ– ತೋಟಗಾರಿಕಾ ಬೆಳೆಗಳಿಗೆ ನೀರಿನ ಕೊರತೆ ಎದುರಾಗುವ ಆತಂಕವೂ ಹೆಚ್ಚಾಗಿದೆ.

ತಾಲ್ಲೂಕಿನ ಎಂ.ಸಿ.ಹಳ್ಳಿ, ಬಾವಿಕೆರೆ (ಬೊಂಬುಸರ, ಗೋಪಾಲ), ಸಿದ್ದರಹಳ್ಳಿ (ಯಲುಗೆರೆ, ಜಂಬದಹಳ್ಳಿ, ಬಿ.ಸಿದ್ದರಹಳ್ಳಿ), ಅಮೃತಾಪುರ (ನಾಗೇನಹಳ್ಳಿ ತಾಂಡ್ಯ), ಕುಡ್ಲೂರು (ಮುಂಡ್ರೆ, ಮುಂಡ್ರೆ ತಾಂಡ್ಯ), ಬೇಲೇನಹಳ್ಳಿ (ಇಟ್ಟಿಗೆ), ಕರಕುಚ್ಚಿ (ಎ ಕಾಲೋನಿ), ಬೆಟ್ಟದಹಳ್ಳಿ, ಚಾಕೋನಹಳ್ಳಿ ಬೋವಿ ಕಾಲೋನಿ, ಸುಣ್ಣದಹಳ್ಳಿ (ಹೊಸಳ್ಳಿ, ಕೆಂಚಾಪುರ ಗೇಟ್), ಬರಗೇನಹಳ್ಳಿ (ಗುಡ್ಡದ ಬೀರನಹಳ್ಳಿ), ಹುಣಸಘಟ್ಟ (ಮೇದಿಹಳ್ಳಿ) ಹಾಗೂ ಸೀತಾಪುರ ಸೇರಿದಂತೆ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ.

ಈ ಹಿನ್ನೆಲೆ ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಉಂಟಾದ ತಕ್ಷಣ ಮುಂಜಾಗ್ರತಾ ಕ್ರಮವಾಗಿ ಸಮೀಪದ ಖಾಸಗಿ ಬಾವಿಗಳನ್ನು ಬಾಡಿಗೆಗೆ ಪಡೆದು, ವಾರದಲ್ಲಿ ಎರಡು– ಮೂರು ಬಾರಿ ನೀರು ಸರಬರಾಜು ಮಾಡಲು ಇಲಾಖೆ ಸೂಚಿಸಿದೆ. ಅದು ಸಾಧ್ಯವಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸೂಚಿಸಲಾಗಿದೆ. ಅಗತ್ಯವಿರುವ ಕಡೆ ಹೊಸ ಕೊಳವೆಬಾವಿ ಕೊರೆದು ನೀರು ಒದಗಿಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಗ್ರಾಮ ಪಂಚಾಯಿತಿಗಳು ಶಿಫಾರಸು ಮಾಡಿವೆ.

50 ವರ್ಷಗಳ ಹಿಂದೆ ಅಳವಡಿಸಿದ 2 ಇಂಚಿನ ಪೈಪ್ಲೈನ್ಗಳು ಕಲ್ಲು– ಮಣ್ಣು ತುಂಬಿಕೊಂಡು, ಮರಗಳ ಬೇರುಗಳು ಬೆಳೆಯುವ ಮೂಲಕ ನೀರಿನ ಹರಿವು ಕುಂಠಿತವಾಗಿದೆ. ಆಗಿದ್ದ 50 ಮನೆಗಳು ಈಗ 500ಕ್ಕೂ ಏರಿರುವುದರಿಂದ ಹಳೆಯ ಪೈಪ್ಲೈನ್ ಮೂಲಕ ಸಮರ್ಪಕವಾಗಿ ನೀರು ಪೂರೈಸುವುದು ಕಷ್ಟವಾಗಿದೆ ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ 5 ಇಂಚಿನ ಪೈಪ್ಲೈನ್ ಅಳವಡಿಸಿ, ಪ್ರತಿ ಮನೆಗೂ ನಿರಂತರ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ. ಆದರೆ, ಕೆಲವು ಗ್ರಾಮಗಳಲ್ಲಿ ಕಾಮಗಾರಿಗೆ ಅಡ್ಡಿ ಉಂಟಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನ ಅಡಿಕೆ, ತೆಂಗು, ಬಾಳೆ ಸೇರಿದಂತೆ ತೋಟಗಾರಿಕಾ ಬೆಳೆಗಳು ಮುಖ್ಯವಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿವೆ. ಈ ಬಾರಿ ಬೇಸಿಗೆಯ ತೀವ್ರತೆಗೆ ಲಿಂಗದಹಳ್ಳಿ, ಕಸಬಾ, ಅಮೃತಾಪುರ ಹಾಗೂ ಲಕ್ಕವಳ್ಳಿ ಹೋಬಳಿಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದ್ದು, ರೈತರು ನೀರಿಗಾಗಿ ಪರದಾಡುತ್ತಿದ್ದಾರೆ.

ಕೆಲವರು ತೋಟಗಳಲ್ಲಿ ಗುಂಡಿ ತೆಗೆದು ಟಾರ್ಪಾಲ್ ಹಾಸಿ ನೀರು ಸಂಗ್ರಹಿಸಿ ವಾರಕ್ಕೊಮ್ಮೆ ನೀರು ಹಾಯಿಸುತ್ತಿದ್ದಾರೆ. ಇನ್ನೂ ಕೆಲವರು ತ್ರೀಫೇಸ್ ವಿದ್ಯುತ್ ಲಭ್ಯವಿರುವ ಸಮಯದಲ್ಲಿ ಮಧ್ಯ ಮಧ್ಯೆ ಮೋಟಾರ್ ನಿಲ್ಲಿಸಿ, ಮತ್ತೆ ಚಾಲನೆ ಮಾಡುವ ಮೂಲಕ ಅಲ್ಪ ಪ್ರಮಾಣದ ನೀರನ್ನು ಬಳಕೆ ಮಾಡುತ್ತಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-126-767185285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.