ಲಕ್ಯಾ ಹೋಬಳಿ, ಹಿರೇಗೌಜ ಗ್ರಾಮದ 111 ಸರ್ವೆ ನಂಬರ್‌ನಲ್ಲಿ ಪರಿಭಾವಿತ ಅರಣ್ಯ ಪಟ್ಟಿ–1ರಲ್ಲಿ 25 ಎಕರೆ, ಪರಿಭಾವಿತ ಅರಣ್ಯ ಪಟ್ಟಿ –2ರಲ್ಲಿ 18 ಎಕರೆ ಜಾಗವಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ 25 ಎಕರೆಯನ್ನು ಪರಿಭಾವಿತ ಅರಣ್ಯಕ್ಕಾಗಿ ಕಾಯ್ದಿರಿಸಿ ನಕ್ಷೆ ಸಿದ್ಧಪಡಿಸಿದ್ದಾರೆ.