ಶುಕ್ರವಾರ, ಅಕ್ಟೋಬರ್ 7, 2022
24 °C
ಆನ್‌ಲೈನ್‌ ವಂಚಕ ಜಾಲ ಮಸಲತ್ತು; ಆಫರ್‌ ಆಮಿಷ

ಮಹಿಳಾ ಟೆಕ್ಕಿಗೆ ₹ 3.51 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಲಕ್ಕಿ ಗ್ರಾಹಕಿಯಾಗಿ ಆಯ್ಕೆಯಾಗಿರುವುದಾಗಿ ಸಾಫ್ಟ್‌ವೇರ್‌ ಎಂಜಿನಿಯರ್‌ ಮಹಿಳೆಯೊಬ್ಬರನ್ನು ನಂಬಿಸಿ, ‘ಆಫರ್‌’ ಆಮಿಷವೊಡ್ಡಿ ವಂಚಕರು ₹ 3.51 ಲಕ್ಷ ಆನ್‌ಲೈನ್‌ನಲ್ಲಿ ದೋಚಿದ್ದಾರೆ.

ಮಹಿಳೆಯು ಬೆಂಗಳೂರಿನಲ್ಲಿ ಉದ್ಯೋಗಿ. ಹಬ್ಬಕ್ಕೆ ಈಚೆಗೆ ಊರಿಗೆ (ಕೊಪ್ಪ ತಾಲ್ಲೂಕಿನ ಕೆಸುವೆ ಗ್ರಾಮ) ಬಂದಿದ್ದಾಗ ವಂಚನೆ ನಡೆದಿದೆ.

ಜಿಲ್ಲಾ ಸೈಬರ್‌, ಆರ್ಥಿಕ ಮತ್ತು ಮಾದಕ (ಸಿಇಎನ್‌) ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆಯು ನೀಡಿರುವ ದೂರಿನ ವಿವರ ಇಂತಿದೆ.

ಒಬ್ಬರು ಫೋನ್‌ ಮಾಡಿ ‘ಮೈ ಗ್ಲಾಮ್‌’ ಕಂಪೆನಿಯವರು ಎಂದು ಹೇಳಿದರು. ರಶ್ಮಿ ಎಂದು ಹೆಸರು ತಿಳಿಸಿದರು. ಕಂಪೆನಿಯ ಮೇಕಪ್‌ ಐಟಂ ಖರೀದಿಸಿರುವವರಲ್ಲಿ ಐವರನ್ನು ಲಕ್ಕಿ ಗ್ರಾಹಕರಾಗಿ ಆಯ್ಕೆ ಮಾಡಲಾಗಿದೆ, ಐವರಲ್ಲಿ ನೀವೂ ಒಬ್ಬರು ಎಂದು ತಿಳಿಸಿದರು.

ನಂತರ 9748782105 ನಂಬರ್‌ನಿಂದ ‘ಆಫರ್‌’ ಸಂದೇಶವನ್ನು ₹ ಕಳಿಸಿದರು. ₹ 4999 ಮೌಲ್ಯದ ವಸ್ತುಗಳನ್ನು ಖರೀದಿಸಿದರೆ ಶೇ 40 ನಗದು ವಾಪಸ್‌ ( ಕ್ಯಾಶ್‌ ಬ್ಯಾಂಕ್‌) ಎಂದು ಸಂದೇಶದಲ್ಲಿ ಇತ್ತು. ನಂತರ, ಒಬ್ಬರು ಫೋನ್‌ ಮಾಡಿ ಮೊದಲು ಹಣ ಪಾವತಿಸಬೇಕು, ನಂತರ ಆಫರ್‌ ಅನ್ವಯವಾಗುತ್ತದೆ ಎಂದು ತಿಳಿಸಿದರು.

₹ 5066 ಹಣವನ್ನು ಅವರು ಹೇಳಿದ ಖಾತೆಗೆ ಪಾವತಿಸಿದೆ.

ಬಳಿಕ 9748782105 ನಂಬರ್‌ ಖರೀದಿ ಆರ್ಡರ್‌ ಸಂದೇಶವನ್ನು ವ್ಯಾಟ್ಸ್‌ ಅಪ್‌ಗೆ ಕಳಿಸಿದರು. ನಂತರ ಒಬ್ಬರು ಫೋನ್‌ ಮಾಡಿ ಖರೀದಿ ಆರ್ಡರ್‌ ವಸ್ತು ತಲುಪಿಸಲು ಮತ್ತು ಜಿಎಸ್‌ಟಿ ₹ 9844 ಜಮೆ ಮಾಡುವಂತೆ ತಿಳಿಸಿದರು. ಅದನ್ನೂ ನಂಬಿ ಹಣ ಪಾವತಿಸಿದೆ ಹಂತಹಂತವಾಗಿ ನೆಟ್‌ಬ್ಯಾಂಕಿಂಗ್‌ ಮೂಲಕ 3.51 ಲಕ್ಷ ಪಾವತಿಸಿರುತ್ತೇನೆ. ಖರೀದಿ ವಸ್ತುಗಳನ್ನು ಕಳಿಸದೆ, ಹಣವನ್ನು ವಾಪಸ್‌ ನೀಡದೆ ವಂಚಿಸಿದ್ದಾರೆ. ವಂಚಕರನ್ನು ಪತ್ತೆ ಹಚ್ಚಿ ಹಣ
ವಾಪಸ್‌ ಕೊಡಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು