ಗುರುವಾರ , ಜೂಲೈ 9, 2020
28 °C
ತರೀಕೆರೆ ಗರ್ಭಿಣಿಗೆ ಸೋಂಕು ದೃಢಪಟ್ಟಿಲ್ಲ

ಕಾಫಿನಾಡಿನಲ್ಲಿ ಮತ್ತೆ ಮೂವರಿಗೆ ಕೋವಿಡ್ ಪತ್ತೆ, ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೋವಿಡ್ ಗುರುವಾರ ಪತ್ತೆಯಾಗಿದೆ. ತರೀಕೆರೆ ಗರ್ಭಿಣಿಯ ಮೊದಲ ವರದಿ ತಪ್ಪು ಪಾಸಿಟಿವ್ ಮಾಹಿತಿಯಾಗಿದ್ದು, ಮಾದರಿಯನ್ನು ಮತ್ತೆ ಐದು ಬಾರಿ ಪರೀಕ್ಷೆ ಮಾಡಿಸಿದ್ದು ನೆಗೆಟಿವ್ ಬಂದಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ. ಗರ್ಭಿಣಿಯ ಗಂಟಲ ದ್ರವ, ಮೂಗಿನ ದ್ರವ ಮಾದರಿಯನ್ನು ಮತ್ತೆ ಐದು ಬಾರಿ ಪರೀಕ್ಷೆ ಮಾಡಿಸಲಾಗಿದ್ದು, ಸೋಂಕು ದೃಢಪಟ್ಟಿಲ್ಲ. 

ಗುರುವಾರ ಪತ್ತೆಯಾಗಿರುವ ಮೂವರೂ ಪುರುಷರು. ಈ ಪೈಕಿ ಮೂಡಿಗೆರೆ ತಾಲ್ಲೂಕಿನ ಒಬ್ಬರು ದೆಹಲಿಯಿಂದ ಬಂದಿದ್ದವರು, ಶಂಗೇರಿ ತಾಲ್ಲೂಕಿನ ಇಬ್ಬರು ಮಹಾರಾಷ್ಟ್ರದಿಂದ ಬಂದಿದ್ದವರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು