ಚಿಕ್ಕಮಗಳೂರು: ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ ತಪ್ಪು ಒಪ್ಪಿಕೊಂಡ ಆರೋಪಿಗೆ ಫಲಕ ಹಿಡಿದು ರಸ್ತೆ ಮಧ್ಯದಲ್ಲಿ ನಿಲ್ಲುವ ವಿಶಿಷ್ಟವಾದ ಶಿಕ್ಷೆಯನ್ನು ಕಡೂರಿನ ನ್ಯಾಯಾಲಯ ನೀಡಿದೆ.

'ಕಡೂರು ತಾಲ್ಲೂಕಿನ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ತನಕ ಪಟ್ಟಣದ ಮರವಂಜಿ ವೃತ್ತದಲ್ಲಿ ಫಲಕ ಹಿಡಿದು ನಿಲ್ಲಬೇಕು. ಈ ಸಮುದಾಯ ಸೇವೆ ಖಚಿತಪಡಿಸಲು ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು' ಎಂದು ಕಡೂರು ಠಾಣೆ ಪಿಎಸ್ಐಗೆ ಇಲ್ಲಿನ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿತ್ತು.

ಅದರಂತೆ ರಂಜಿತ್ ಮಂಗಳವಾರ ಸಂಚಾರ ನಿಯಮ ಒಳಗೊಂಡ ಫಲಕ ಹಿಡಿದು ನಿಂತಿದ್ದರು. ಪೊಲೀಸರು ಕಾವಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.