ಕಡೂರು: ಟ್ರಾಕ್ಟರ್ ಟ್ರೈಲರ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಯಗಟಿ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಉಡುಗೆರೆಯ ಪ್ರವೀಣ್ ಕುಮಾರ್ ಮತ್ತು ತರೀಕೆರೆ ತಾಲ್ಲೂಕಿನ ವರ್ತಿಗುಂಡಿಯ ಪ್ರಕಾಶ್ ಬಂಧಿತರು. ಆರೋಪಿಗಳಿಂದ ₹1.5 ಲಕ್ಷ ಮೌಲ್ಯದ ಟ್ರೈಲರ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಯಗಟಿ ಪಿಎಸೈ ಶಶಿಕುಮಾರ್ ತಿಳಿಸಿದ್ದಾರೆ.