ಕಾಂಗ್ರೆಸ್ ರೂಪಿಸಿದ್ದ ಬಿಪಿಎಲ್ ಕಾರ್ಡ್ ನಿಯಮಾವಳಿ ಪುನರುಚ್ಚಾರ: ಸಿ.ಟಿ. ರವಿ

ಚಿಕ್ಕಮಗಳೂರು: ‘ಆರ್‌ಸಿಸಿ ಮನೆ, ಕಲರ್ ಟಿ.ವಿ, ಬೈಕು, ಕಾರು ಇದ್ದವರು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ ಎಂದು 2016–17ನೇ ಸಾಲಿನಲ್ಲಿ ನಿಯಮಾವಳಿ ರೂಪಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ನಿಯಮಾವಳಿಯನ್ನು ಈಗಿನ ಸಚಿವ ಉಮೇಶ್ ಕತ್ತಿ ಪುನರುಚ್ಚರಿಸಿದ್ದಾರೆ. ನಿಯಮ ರೂಪಿಸಿದಾಗ ಕಾಂಗ್ರೆಸ್‌ನವರು ಪ್ರಜ್ಞಾವಸ್ಥೆಯಲ್ಲಿ ಇರಲಿಲ್ಲವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಇದೆ. ಆ ಕಾರಣಕ್ಕೆ ಸಿದ್ದರಾಮಯ್ಯ ನವದೆಹಲಿಗೆ ತೆರಳಿರಬಹುದು’ ಎಂದು ಉತ್ತರಿಸಿದರು.
ಇದನ್ನೂ ಓದಿ.. ಬಿಪಿಎಲ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ಇಲ್ಲ: ಆಹಾರ ಇಲಾಖೆ ಸ್ಪಷ್ಟನೆ
ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು’: ‘ಅರಾಜಕತೆ ಸೃಷ್ಟಿ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಆಧರಿಸಿ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ಅರಾಜಕತೆ ಹುಟ್ಟುಹಾಕುವುದು ಪ್ರಜಾಪ್ರಭುತ್ವದ ಲಕ್ಷಣವೇ? ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುಹಕವಾಡಿದರು.
‘ಜ.26ರಂದು ಏನೇನಾಗುತ್ತೆ, ಅದರ ಮುಂದೆ ಏನೇನು ಮಾಡಬೇಕು ಎಂಬ ‘ಆಕ್ಷನ್ ಪ್ಲಾನ್’ ಸಂಚಿನ ಭಾಗವಾಗಿತ್ತು. ದಿಶಾರವಿ ಹೆಸರು ಈ ಹಿಂದೆ ಯಾರಿಗೆ ಗೊತ್ತಿತ್ತು? ನಿಮಗೆ ಸಿ.ಟಿ.ರವಿ ಗೊತ್ತಿತ್ತು. ಆ ಹೆಸರು ಈಗ ಚರ್ಚೆಗೆ ಬಂದಿದೆ, ವೈಭವೀಕರಿಸಿ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಬಿಂದ್ರನ್ ವಾಲೆಗೆ ಬೆಂಬಲ ಕೊಟ್ಟಿದ್ದಕ್ಕೆ ಇಂದಿರಾಗಾಂಧಿ, ಎಲ್‌ಟಿಟಿಇ ಬೆಂಬಲಿಸಿ ಹಾವು–ಏಣಿ ಆಡಿದ ಕಾರಣಕ್ಕೆ ರಾಜೀವ್ ಗಾಂಧಿ ಬಲಿಯಾದರು ಎಂಬುದನ್ನು ಕಾಂಗ್ರೆಸ್‌ನವರು ನೆನಪಿಟ್ಟುಕೊಳ್ಳಬೇಕು’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.