ಶೃಂಗೇರಿ: ಶೃಂಗೇರಿ ಶಾರದಾ ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿಯವರ 76ನೇ ವರ್ಧಂತಿ ಮಹೋತ್ಸವ ಮಂಗಳವಾರ ಶಾರದಾ ಪೀಠದಲ್ಲಿ ನಡೆಯಲಿದೆ.

ವರ್ಧಂತಿ ಪ್ರಯುಕ್ತ ಸೋಮವಾರ ಈಶ್ವರಗಿರಿಯ ಮಲಹಾನಿಕರೇಶ್ವರ ಸ್ವಾಮಿ ಮತ್ತು ಭವಾನಿ ಅಮ್ಮನವರ ದೇವಸ್ಥಾನದಲ್ಲಿ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸಿದರು.

ಗುರುಗಳ ವರ್ಧಂತಿಯ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಮಾ.19ರಿಂದ ಆರಂಭಗೊಂಡಿದ್ದು 30ರವರೆಗೂ ನಡೆಯಲಿದೆ. 24ರಂದು ಬೆಳಿಗ್ಗೆ 7 ಗಂಟೆಗೆ ಗುರುನಿವಾಸದಲ್ಲಿ ಗುರುಗಳ ಆಹ್ನಿಕ ದರ್ಶನ, ಮಧ್ಯಾಹ್ನ 12ಕ್ಕೆ ಶಾರದಾಂಬೆಗೆ ಭಾರತೀತೀರ್ಥ ಸ್ವಾಮೀಜಿಗಳಿಂದ ವಿಶೇಷ ಪೂಜೆ, ಮಧ್ಯಾಹ್ನ 12.30ಕ್ಕೆ ಸಹಸ್ರ ಚಂಡಿಕಾಯಾಗದ ಪೂರ್ಣಾಹುತಿ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 6 ಗಂಟೆಗೆ ಗುರುನಿವಾಸದಲ್ಲಿ ಗುರುಗಳಿಗೆ ಸಾಮೂಹಿಕ ಗುರುವಂದನೆ ನಡೆಯಲಿದೆ. ಸಂಜೆ 6.30ಕ್ಕೆ ಭಾರತೀತೀರ್ಥ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.