ಐಟಿ ಅಧಿಕಾರಿಗಳಿಂದ ದಾಖಲೆ ತಲಾಶ್‌

7
ಎಪಿಎಂಸಿ ಪ್ರಾಂಗಣದ ಕೆ.ಆರ್‌.ತರಕಾರಿ ಮಳಿಗೆ

ಐಟಿ ಅಧಿಕಾರಿಗಳಿಂದ ದಾಖಲೆ ತಲಾಶ್‌

Published:
Updated:
Deccan Herald

ಚಿಕ್ಕಮಗಳೂರು: ಆದಾಯ ತೆರಿಗೆ (ಐಟಿ) ಅಧಿಕಾರಿಗಳ ತಂಡವು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದ ಕೆ.ಆರ್‌.ತರಕಾರಿ ಮಂಡಿಯ ಕಚೇರಿಯಲ್ಲಿನ ದಾಖಲೆಗಳನ್ನು ಶುಕ್ರವಾರ ಪರಿಶೀಲನೆ ಮಾಡಿದೆ.

ವರ್ತಕ ರೇವಣ್ಣ ಅವರ ಮಳಿಗೆಯಲ್ಲಿ ಅಧಿಕಾರಿಗಳ ತಂಡ ತಲಾಶ್‌ ನಡೆಸಿದೆ. ಸಂಜೆವರೆಗೂ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಿದ್ದಾರೆ.

‘ರೇವಣ್ಣ ಅವರು ಕೆಲವಾರು ವರ್ಷಗಳಿಂದ ಟೊಮೆಟೊ ವ್ಯಾಪಾರ ಮಾಡುತ್ತಾರೆ. ದಲ್ಲಾಳಿಗಳಿಂದ ತರಕಾರಿ ಖರೀದಿಸಿ ಹೊರ ಊರುಗಳಿಗೆ ಕಳಿಸುತ್ತಾರೆ. ಅವರ ಮನೆಯಲ್ಲೂ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡಿದ್ದಾರೆ’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !