ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದಲ್ಲಿ ಕುಳಿತು ರೋಗಿ ಆಹಾರ ಸೇವನೆ; ವಿಡಿಯೊ ವೈರಲ್‌

Last Updated 20 ಜುಲೈ 2020, 16:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಲು ಗಾಯಗೊಂಡಿರುವ ರೋಗಿಯೊಬ್ಬರು ಜಿಲ್ಲಾ ಆಸ್ಪತ್ರೆಯ ಒಳರೋಗಿ ವಿಭಾಗದ ಕಟ್ಟಡದ ಕೋಣೆಯೊಂದರಲ್ಲಿ ನೆಲದಲ್ಲಿ ಕುಳಿತು ಪ್ರಯಾಸದಿಂದ ಆಹಾರ ಸೇವನೆ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ವಿಡಿಯೋ 53 ಸೆಕೆಂಡು ಇದೆ. ಎಡಗಾಲಿಗೆ ಬ್ಯಾಂಡೇಜು ಕಟ್ಟಲಾಗಿದೆ. ನೆಲದಲ್ಲಿ ಕುಳಿತು ಮಂಚಕ್ಕೆ ಒರಗಿ ಕೈಯಲ್ಲಿ ತಟ್ಟೆ ಹಿಡಿದು ಆಹಾರ ಸೇವಿಸುವ ದೃಶ್ಯ ವಿಡಿಯೊದಲ್ಲಿದೆ.

ಜಿಲ್ಲಾ ಸರ್ಜನ್‌ ಸಿ.ಮೋಹನ್‌ಕುಮಾರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ವ್ಯಕ್ತಿಗೆ ಕಾಲಿಗೆ ಗಾಯವಾಗಿದ್ದು ಬ್ಯಾಂಡೇಜ್‌ ಮಾಡಲಾಗಿದೆ. ಪದೇಪದೇ ಮೂತ್ರ ಮಾಡುತ್ತಾರೆ. ಆತನ ಜತೆಗೆ ಮನೆಯವರು ಯಾರೂ ಇಲ್ಲ. ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇಡಲಾಗಿದೆ’ ಎಂದು ತಿಳಿಸಿದರು.

‘ಮಂಚದ ಮೇಲೆ ಕುಳಿತುಕೊಳ್ಳಲು ಹೇಳಿದರೂ ಕೇಳಲ್ಲ. ನೆಲದಲ್ಲೇ ಕುಳಿತು ಆಹಾರ ಸೇವಿಸುತ್ತಾರೆ. ಬಟ್ಟೆಯನ್ನು ನೀಡಿದ್ದೇವೆ. ನಿಗಾ ವಹಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT