ಕಾರ್ಗಿಲ್ ವಿಜಯ ದಿವಸ್ ಆಚರಣೆ

7

ಕಾರ್ಗಿಲ್ ವಿಜಯ ದಿವಸ್ ಆಚರಣೆ

Published:
Updated:
Deccan Herald

ಕಡೂರು: ‘ದೇಶ ಕಾಯುವ ಯೋಧರ ಬಗ್ಗೆ ಪ್ರತಿಯೊಬ್ಬರೂ ಗೌರವ ಭಾವನೆ ಹೊಂದಿರಬೇಕು’ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಟಿ.ಚಂದ್ರಪ್ಪ ತಿಳಿಸಿದರು.

ಶಾಸಕರ ಮಾದರಿ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ‘ನಮ್ಮ ಯೋಧರ ಅಪ್ರತಿಮ ಸಾಹಸದಿಂದ ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಗಳಿಸಿತು. ಯುದ್ಧದ ಸಂದರ್ಭ ನೂರಾರು ಯೋಧರು  ಪ್ರಾಣ ಕಳೆದುಕೊಂಡರು. ಅವರ ತ್ಯಾಗವನ್ನು ಇಂದು ಬಹು ಗೌರವದಿಂದ ಸ್ಮರಿಸಲಾಗುತ್ತದೆ. ಸೈನಿಕರ ತ್ಯಾಗದಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಹಾಗಾಗಿ ದೇಶ ಕಾಯುವ ಯೋಧರನ್ನು ಗೌರವಯುತವಾಗಿ ಕಾಣಬೇಕಿದೆ’ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಕೆ.ಟಿ.ಮಂಜುನಾಥ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಶಿಕ್ಷಕಿ ಶೋಭಾ, ಶೇಖರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !