ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಹೊನ್ನೂರು: 82 ಸರ್ಕಾರಿ ಶಾಲೆಗಳಿಗೆ ನೀರಿನ ಫಿಲ್ಟರ್ ವಿತರಣೆ

Last Updated 3 ಅಕ್ಟೋಬರ್ 2022, 4:29 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಮನುಷ್ಯನ ಬದುಕು ಶಾಶ್ವತವಲ್ಲ. ಆದರೆ, ನಾವು ಮಾಡಿದ ಸತ್ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಟಿ.ಆರ್.ನಾಗಪ್ಪಗೌಡ ತಿಳಿಸಿದರು.

ಸರ್ಕಾರಿ ಪ್ರೌಢಶಾಲೆಯ ಅವರಣದಲ್ಲಿ ಮುದ್ರಂಗಡಿಯ ಉದ್ಯಮಿ ಗಣೇಶ್ ಕಾಮತ್ ಅವರ ಸಮರ್ಪಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದಲ್ಲಿನ ಶಾಲೆಗಳಲ್ಲಿ ಮಕ್ಕಳು ಕಲುಷಿತ ನೀರು ಕುಡಿಯುವುದನ್ನು ತಪ್ಪಿಸುವ ಉದ್ದೇಶದಿಂದ ಟ್ರಸ್ಟ್ ಫಿಲ್ಟರ್ ನೀಡುತ್ತಿದೆ. ಈ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಿದೆ’ ಎಂದರು.

ಸಮರ್ಪಣಾ ಟ್ರಸ್ಟ್‌ನ ದೀಪಾ ಶೆಟ್ಟಿ ಮಾತನಾಡಿ, 2016ರಲ್ಲಿ ಆರಂಭಗೊಂಡ ಸಂಸ್ಥೆ ತನ್ನ ಚಟುವಟಿಕೆಗಳನ್ನು ರಾಜ್ಯದ ಹಲವು ಕಡೆಗಳಿಗೆ ವಿಸ್ತರಿಸಿದೆ. ಹೆಚ್ಚು ವಿದ್ಯಾರ್ಥಿಗಳಿರುವ ಕಡೆಗೆ ವಿದ್ಯುತ್ ಚಾಲಿತ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. ಬಡ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಅವಶ್ಯಕತೆ ಇರುವವರ ನೆರವಿಗೆ ಟ್ರಸ್ಟ್ ನಿಲ್ಲುತ್ತದೆ ಎಂದರು.

ಸುಮಾರು ₹4 ಲಕ್ಷ ವೆಚ್ಚದಲ್ಲಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕಿನ 42 ಶಾಲೆಗಳಿಗೆ ವಿದ್ಯುತ್ ಚಾಲಿತ ನೀರಿನ ಫಿಲ್ಟರ್ ಹಾಗೂ ಖಾಂಡ್ಯ ಹೋಬಳಿಯ ಉಜ್ಜಿನಿ, ಹ್ಯಾರಂಬಿ, ಒಲಗೋಡು, ಬೈರಮಕ್ಕಿ, ಕೆಲಹೊಳೆ, ಬ್ಯಾಡಗೆರೆ, ಉಜ್ಜನಿ ಹೊಸಪೇಟೆ ಹಾಗೂ ಗುಂಬಿ ಹೊಂಬಳ ಸೇರಿದಂತೆ 40 ಶಾಲೆಗಳಿಗೆ ಸ್ಟೀಲ್ ಫಿಲ್ಟರ್ ವಿತರಿಸಲಾಯಿತು.

ಕೊಪ್ಪ ಸಣ್ಣಕೆರೆ ಶಾಲೆಗೆ ಸುಮಾರು ₹ 15 ಸಾವಿರ ವೆಚ್ಚದಲ್ಲಿ ಪುಸ್ತಕ ಹಾಗೂ ಪುಸ್ತಕದ ರ‍್ಯಾಕ್ ನೀಡಲಾಯಿತು.

ಮುಖ್ಯ ಶಿಕ್ಷಕ ಕೊಟ್ರೇಶಪ್ಪ, ಸಂದೀಪ್ ಶೆಟ್ಟಿ, ಅನಿಲ್ ಮಸ್ಕರೇನಿಸ್, ರೋಹಿತ್ ಶೆಟ್ಟಿ, ರಚನ್ ಮಾಗುಂಡಿ, ರಮೇಶ್ ಗಡಿಗೇಶ್ವರ, ರಮ್ಯಾ ಶೆಟ್ಟಿಕೊಪ್ಪ, ವಿಜಯ ನಾಗೇಶ್, ಕಾರ್ತಿಕ್ ಕಲ್ಮನೆ, ದರ್ಶನ್ ನರಸಿಂಹರಾಜಪುರ, ರೋಹನ್, ರಂಜಿತ್ ಶೃಂಗೇರಿ, ನಿಖಿಲ್, ಸ್ವಸ್ಥಿಕ್ ಗಣೇಶ್, ಸ್ವಾತಿ, ನಿಖಿತಾ, ಶಿಕ್ಷಕರಾದ ರಾಘವೇಂದ್ರ, ಸುರೇಂದ್ರ, ರಮಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT