ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯ ನೆಂಟಸ್ತನ, ನೀರಿಗೆ ಬಡತನ: ಇದು ಕಡೂರು- ಬೀರೂರು ಪಟ್ಟಣಗಳ ಪರಿಸ್ಥಿತಿ

ಕಡೂರು-–ಬೀರೂರು: ಭದ್ರಾ ಕುಡಿಯುವ ನೀರು ಪೂರೈಕೆಯಲ್ಲಿ ಪದೇ ಪದೇ ಅಡಚಣೆ
Last Updated 29 ಆಗಸ್ಟ್ 2020, 3:44 IST
ಅಕ್ಷರ ಗಾತ್ರ

ಬೀರೂರು: ಕಡೂರು- ಬೀರೂರು ಪಟ್ಟಣ ಗಳಿಗೆ ಭದ್ರಾ ನೀರು ಪೂರೈಕೆ ಯೋಜನೆ ಯಿಂದ ಜನರ ಮನೆ ಬಾಗಿಲಿಗೆ ನೀರು ತಲುಪಲು ಆರಂಭವಾದಾಗಿನಿಂದಲೂ ಪ್ರತಿ ತಿಂಗಳು ಏನಾದರೂ ತಾಂತ್ರಿಕ ಸಮಸ್ಯೆಯಿಂದ ಸಮರ್ಪಕ ಪೂರೈಕೆ ಸಾಧ್ಯವಾಗಿಲ್ಲ. ಸುತ್ತಮುತ್ತಲ 32 ಹಳ್ಳಿಗಳಿಗೆ ಕೂಡಾ ಪೂರೈಸುವ ಹೊಣೆ ಇದೆ. ಆದರೆ, ಎರಡು ಪಟ್ಟಣಗಳಿಗೆ ನೀರು ಪೂರೈಕೆಗೆ ಅಡಚಣೆ ಕಂಡುಬಂದರೆ ಹಳ್ಳಿಗಳಿಗೆ ಕೊಡುವುದು ಯಾವಾಗ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಸದ್ಯ ಒಂದು ಪಂಪ್ ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಅದರ ಮೂಲಕವೇ ನೀರು ಬರುತ್ತಿದೆ. ಶುದ್ಧೀಕರಣ ಘಟಕಕ್ಕೆ ಬರುವ ನೀರು ಮತ್ತು ಶುದ್ಧೀಕರಣಗೊಂಡ ನೀರಿನ ಹರಿವು ಏಕಪ್ರಕಾರವಾಗಿದ್ದರೆ ಮಾತ್ರ ಮೋಟರ್‌ ಪಂಪ್‍ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ. 6 ತಿಂಗಳಿನಲ್ಲಿ ನಾಲ್ಕು ಹೊಸ ಬೇರಿಂಗ್ ಅಳವಡಿಸಿದರೂ ಯಂತ್ರ ಕೈಕೊಡುತ್ತಿದೆ. ವ್ಯತ್ಯಾಸವಿದ್ದರೆ ಇಂತಹ ಸನ್ನಿವೇಶಗಳು ಸಾಮಾನ್ಯ ಎನ್ನುವುದು ಪರಿಣತರ ಅಭಿಪ್ರಾಯ. ಮಹತ್ವಾಕಾಂಕ್ಷೆಯ ಯೋಜನೆಯು ವಾರಕ್ಕೆ ಒಮ್ಮೆ ನೀರು ನೀಡುವುದೂ ದುಸ್ತರ ಎನ್ನುವುದು ಪ್ರಸ್ತುತ ಸನ್ನಿವೇಶ.

ಬೀರೂರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಂದು ಬಾರಿ ಮಾತ್ರ ನೀರು ಪೂರೈಸಲಾಗಿದೆ. ಜಾಕ್‍ವೆಲ್ ಬಳಿ ದುರಸ್ತಿ ಬೀರೂರು, ತರೀಕೆರೆ ಶುದ್ಧೀಕರಣ ಘಟಕದ ನಿರ್ವಹಣೆ ಕಡೂರು ಪುರಸಭೆಯದು ಎಂದು ಮೌಖಿಕ ಒಪ್ಪಂದವಾಗಿದೆ. ಅದರಂತೆ ನಿರ್ವಹಣೆಯ ಗುತ್ತಿಗೆ ಪಡೆದವರು ಲಕ್ಕವಳ್ಳಿ ಬಳಿ ಜಾಕ್‍ವೆಲ್ ನಿರ್ವಹಿಸು ವವರಿಗೆ ಬೀರೂರು ಟೆಂಡರ್‍ದಾರ ವೇತನ ನೀಡಬೇಕು, ತರೀಕೆರೆ ಘಟಕಕ್ಕೆ ಕಡೂರು ಗುತ್ತಿಗೆದಾರ ಸಂಬಳ ಪಾವತಿ ಸಬೇಕು, ಸಾಮಗ್ರಿಗಳನ್ನು ಎರಡೂ ಪುರಸಭೆಯವರು ತಲಾ 6 ತಿಂಗಳು ಪೂರೈಸಬೇಕು ಎನ್ನುವುದು ಅಘೋಷಿತ ಕಾರ್ಯಕ್ರಮವಾಗಿದೆ. ಯಾವುದರಲ್ಲಿ ಹೆಚ್ಚು ಕಮ್ಮಿಯಾದರೂ ನೀರು ಹರಿದುಬರುವುದು ಬಂದ್ ಆಗುತ್ತದೆ, ಇದರ ಪರಿಣಾಮ ಜನರ ಮೇಲೆ.

‘ಇಡೀ ಬೀರೂರು ಪಟ್ಟಣ ಈಗ ಭದ್ರಾ ನೀರಿನ ಮೇಲೆ ಅವಲಂಬಿತ ವಾಗಿದೆ. ಪೂರೈಕೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಉಳ್ಳವರು ಟ್ಯಾಂಕರ್ ಹಾಕಿಸಿಯಾದರೂ ಅಗತ್ಯ ಪೂರೈಸಿ ಕೊಳ್ಳುತ್ತಾರೆ. ಏನೂ ಸೌಲಭ್ಯ ಇಲ್ಲದೆ ನಲ್ಲಿಯಲ್ಲಿ ಬರುವ ನೀರನ್ನು ಮನೆಯ ಪಾತ್ರೆ, ಡ್ರಂಗಳಲ್ಲಿ ಕಾದಿಟ್ಟುಕೊಂಡು ಜೀವನ ನಡೆಸುವವರು ಏನು ಮಾಡಬೇಕು? ಪುರಸಭೆ ಕೊಳವೆಬಾವಿ ನೀರು ಕೊಟ್ಟಾದರೂ ಸಮಸ್ಯೆ ಬಗೆಹರಿಸಬೇಕು. ಆದರೆ, ಇಲ್ಲಿ ಎಲ್ಲವೂ ಅವ್ಯವಸ್ಥೆ’ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಬೆಳ್ಳಿಪ್ರಕಾಶ್, ‘10 ದಿನಕ್ಕೆ ಒಮ್ಮೆ ಜಾಕ್‍ವೆಲ್ ಮತ್ತು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡುತ್ತಿದ್ದು, ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ವ್ಯವಸ್ಥೆ ಮಾಡಲಾಗಿದೆ. ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ದೂರದೃಷ್ಟಿಯ ಕಾರ್ಯಕ್ರಮ ರೂಪಿಸದಿರುವುದು ಒಂದು ಲೋಪ. 32 ಹಳ್ಳಿಗಳಿಗೆ ಕೂಡಾ ನೀರು ಕೊಡಬೇಕಿರುವುದು, ಶುದ್ಧೀಕರಣ ಘಟಕದಲ್ಲಿ ಯಂತ್ರಗಳಿಂದ ಸಮಸ್ಯೆ ಆಗುತ್ತಿರುವುದನ್ನು ಮನಗಂಡು ₹ 57.50ಲಕ್ಷ ವೆಚ್ಚದಲ್ಲಿ ಕಿರ್ಲೋಸ್ಕರ್ ಕಂಪನಿಯಿಂದ 2 ಹೊಸ ಪಂಪ್ ಖರೀದಿಸುವಂತೆ ಸೂಚಿಸಲಾಗಿದೆ. ವಾರ್ಷಿಕ ನಿರ್ವಹಣೆಗಾಗಿ ಪರಿಣತರನ್ನು ನೇಮಿಸುವ ಚಿಂತನೆ ನಡೆದಿದೆ. ಜಾಕ್‍ವೆಲ್ ಬಳಿ ಒಂದು ಪಂಪ್ ಮತ್ತು ಮೋಟರ್ ಅಳವಡಿಸಲು ನಿರ್ಧರಿಸಲಾಗಿದೆ. ಇನ್ನು ಮೂರು-ನಾಲ್ಕು ತಿಂಗಳ ಒಳಗೆ ಸಮರ್ಪಕ ನೀರು ವಿತರಣೆ ಸಾಧ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT