ಶಿವಪುರ ಗ್ರಾಮದ ಲಕ್ಷ್ಮಿ ಮೃತಪಟ್ಟ ಮಹಿಳೆ. ‘ನನ್ನ ತಂಗಿಯ ಗಂಡ ಮಣಿಕಂಠ ಕುಡಿದ ಅಮಲಿನಲ್ಲಿ ನನ್ನ ತಂಗಿಯ ಆಕೆಗೆ ಪ್ರತಿನಿತ್ಯ ಹೊಡೆಯುತ್ತಿದ್ದ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಆತನೇ ತಂಗಿಯನ್ನು ಹತ್ಯೆ ಮಾಡಿರುವ ಶಂಕೆಯಿದೆ. ಮಂಗಳವಾರ ಮಣಿಕಂಠ ಕರೆ ಮಾಡಿ, ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾನೆ. ಶಿವಪುರಕ್ಕೆ ಬಂದು ನೋಡಿದಾಗ ಅಲ್ಲಿ ಶವ ಇರಲಿಲ್ಲ. ಅಲ್ಲಿ ರಕ್ತ ಮತ್ತು ತಲೆ ಕೂದಲು ಬಿದ್ದಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ, ಆತ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಮತ್ತು ನಿತ್ಯ ಕುಡಿದು ಬಂದು ಲಕ್ಷ್ಮಿಗೆ ಥಳಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ತಂಗಿ ಕೂಡ ಈ ಹಿಂದೆ ಗಂಡ ಹೊಡೆಯುತ್ತಿದ್ದ ಬಗ್ಗೆ ತಿಳಿಸಿದ್ದಳು. ಆತನ ತಾಯಿ ಕೂಡ ಆಕೆಗೆ ಕಿರುಕುಳ ನೀಡುತ್ತಿದ್ದಳು. ಇದನ್ನೆಲ್ಲ ಗಮನಿಸಿದರೆ, ಮಣಿಕಂಠನೇ ಕೊಲೆ ಮಾಡಿರುವ ಸಾಧ್ಯತೆ ಇದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕುಪ್ಪಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.