ಶೃಂಗೇರಿ: ‘ಸಮಾಜದ ಎಲ್ಲ ಸ್ತರಗಳಲ್ಲಿ ತನ್ನ ಅಸ್ತಿತ್ವ ರೂಪಿಸಿರುವ ಮಹಿಳೆಯರು, ಭಾರತದ ಪ್ರಗತಿಗೆ ನೀಡಿದ ಕೊಡುಗೆ ಅನುಪಮ. ತನ್ನೊಳಗಿನ ಸಾಮರ್ಥ್ಯವನ್ನು ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಗಟ್ಟಿಗೊಳಿಸಿದ ಆಕೆಯ ಆತ್ಮವಿಶ್ವಾಸ ಎಲ್ಲರಿಗೂ ಮಾದರಿ’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೊಡುರೂ ರಾಜು ಹೇಳಿದರು.

ಶೃಂಗೇರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ಯಾರಂಟಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿಷ್ಟವಾದ ಸ್ಥಾನವಿದೆ. ಮಕ್ಕಳ ಬದುಕನ್ನು ಕಟ್ಟಿಕೊಡಲು ಮಾಡುವ ತ್ಯಾಗ, ಏಕಕಾಲಕ್ಕೆ ಹಲವು ಕೆಲಸ ನಿರ್ವಹಿಸುವ ಆಕೆಯ ದಕ್ಷತೆ, ಕಚೇರಿಯಲ್ಲಿ ನಿರ್ವಹಿಸುವ ಪ್ರಾಮಾಣಿಕ ಸೇವೆ ಪ್ರಶಂಸನೀಯ. ದೇಶದ ಅಭಿವೃದ್ಧಿಗೆ ಮಹಿಳೆಯರ ನಾಯಕತ್ವದ ಅವಶ್ಯಕತೆಯಿದೆ’ ಎಂದರು.

ಸನ್ಮಾನ ಸ್ವೀಕರಿಸಿದ ಮಾತನಾಡಿದ ಶೈಲಾ ಯೋಗಪ್ಪ, ‘ಮಹಿಳೆಯರಲ್ಲಿರುವ ಸೃಜನಶೀಲತೆ, ಸಾಟಿಯಿಲ್ಲದ ದೃಢತೆ, ಸದ್ಭಾವನೆ, ಕ್ರಿಯಾಶೀಲತೆಯ ಗುಣಶೀಲತೆಗೆ ಜಗತ್ತು ಆಕೆಗೆ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ನೀಡಿದೆ. ಆಕೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ, ಕೌಶಲ್ಯತೆಗೆ ಪ್ರೋತ್ಸಾಹ ನೀಡುವ ಸುಮನಸ್ಸುಗಳು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ದಿನಾಚರಣೆ ಅರ್ಥಪೂರ್ಣವಾಗಲು ಸಾಧ್ಯ’ ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಶಾರದಾ ಮಾತನಾಡಿ, ‘ಒಂದು ಹೆಣ್ಣಿನ ವ್ಯಕ್ತಿತ್ವ ಅರಳುವುದು ಆಕೆಯ ತ್ಯಾಗಮಯ ಬದುಕಿನಿಂದ ಸಾಧ್ಯ. ಹೆಣ್ಣು ಸಾಂಸ್ಕೃತಿಕ, ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡರೆ ಸಮಾಜದ ಉನ್ನತ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಹೆಣ್ಣು ಸಂಸ್ಕೃತಿ ಮತ್ತು ಸೃಷ್ಟಿಯ ಸಂಕೇತ. ಅವರಿಗೆ ಗೌರವ ನೀಡುವ, ನಿರಂತರ ಪ್ರೋತ್ಸಾಹ ನೀಡುವ ಮನೋಭಾವ ಎಲ್ಲರಲ್ಲೂ ಮೂಡಿಬರಬೇಕು’ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ದೇವೇಂದ್ರ ಕಾವಡಿ, ರಮೇಶ್, ಕೃಷ್ಣಪ್ಪ, ಚಂದ್ರಮತಿ ತಿಮ್ಮಪ್ಪ, ಲಕ್ಷ್ಮೀಶ್, ನೌಕರರ ಸಂಘದ ಅಧ್ಯಕ್ಷ ಬಿ.ಜಿ ನಾಗೇಶ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ದಿನೇಶ್ ಹೆಗ್ಡೆ, ಪಿಡಿಒ ಮನೋಜ್, ಮಂಜಪ್ಪ ಇದ್ದರು.

ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಿ

‘ಮಾತೃತ್ವ ಹೆಣ್ಣಿಗೆ ಒಲಿದು ಬಂದ ಭಾಗ್ಯ. ಸಮಾಜದಲ್ಲಿನ ಹಲವು ಕಟ್ಟುಪಾಡುಗಳು ಅಚಾರ-ವಿಚಾರಗಳಿಂದ ಮಹಿಳೆಗೆ ಅನಾನುಕೂಲ ಆಗಿರುವುದೇ ಹೆಚ್ಚು. ಇದರಿಂದ ಪಾರಾಗಲು ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬೇಕು. ತಮ್ಮ ಸ್ವಸಾಮರ್ಥ್ಯದಿಂದ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ. ಆದರೂ ಕೂಡ ಆಕೆ ಸಮಾಜದಲ್ಲಿ ಎರಡನೇ ಅಂಗವಾಗಿ ಗುರುತಿಸಲ್ಪಟ್ಟಿದ್ದಾಳೆ. ಹೆಣ್ಣು ಅಬಲೆಯಲ್ಲ ಸಬಲೆ. ತನ್ನ ಅಂತರಂಗದ ಸಾಮರ್ಥ್ಯವನ್ನು ಮನನ ಮಾಡುವ ಅದ್ಭುತ ಗ್ರಹಿಕೆ ಅವಳಲ್ಲಿದೆ. ಸಮಾಜದ ಪುನರ್ ನಿರ್ಮಾಣದ ಶಕ್ತಿ ಹೆಣ್ಣಲ್ಲಿದೆ. ಆದ್ದರಿಂದ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನ ನೀಡಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ. ರಮೇಶ್ ಭಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.