ಮೂಡಿಗೆರೆ: ಕೃಷಿಯ ಯಶಸ್ಸಿನಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಐಟಿಸಿ ಸಂಸ್ಥೆಯ ಸಂದೀಪ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿ ಪಂಚವಟಿಯಲ್ಲಿ ‘ಮಹಿಳಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಹಾಗೂ ಟೆರ್ರಾ ಈಕೋ ಪ್ರೆನ್ಯೂಸರ್ಸ್, ಮಹಿಳಾ ರೈತ ಉತ್ಪಾದಕ ಕಂಪನಿ ನಿಯಮಿತ, ಕಳಸ ಬುಡಕಟ್ಟು ರೈತ ಉತ್ಪಾದಕ ಸಂಘ, ಧನಲಕ್ಷ್ಮೀ ಗಿರಿಜನ ಕಾಫಿ ಬೆಳೆಗಾರರ ಸಂಘ, ಗಡಿಗೇಶ್ವರ ರೈತ ಉತ್ಪಾದಕ ಕಂಪನಿ ನಿಯಮಿತ, ಗಿರಿ ಸಿರಿ ಸಂಜೀವಿನಿ ಮಹಿಳಾ ರೈತ ಉತ್ಪಾದಕ ನಿಯಮಿತದ ಸಹಯೋಗದಲ್ಲಿ ಏರ್ಪಡಿಸಿದ್ದ ‘ಖರೀದಿದಾರರು ಹಾಗೂ ಮಾರಾಟಗಾರರ ಸಭೆ’ಯಲ್ಲಿ ಅವರು ಮಾತನಾಡಿದರು.

ಕೃಷಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಗುಣಮಟ್ಟಯುಕ್ತ ಸರಕುಗಳಿಗೆ ಸರ್ವಕಾಲಕ್ಕೂ ಬೇಡಿಕೆ ಸೃಷ್ಟಿಯಾಗುತ್ತದೆ. ಉತ್ಪಾದಕರು ಹಾಗೂ ಗ್ರಾಹಕರ ನಡುವಿನ ನೇರ ಸಂಬಂಧದಿಂದ ಇಬ್ಬರಿಗೂ ಗರಿಷ್ಠ ಲಾಭವಾಗುತ್ತದೆ ಎಂದರು.

ರೈತ ಮಹಿಳಾ ಉತ್ಪಾದಕರ ಸಂಘದ ಅಧ್ಯಕ್ಷೆ ಶೋಭಾಕುಮಾರಿ, ಉಪಾಧ್ಯಕ್ಷೆ ಸರೋಜ ಸುರೇಂದ್ರ, ಕಾರ್ಯದರ್ಶಿ ಕೀರ್ತಿಕಿರಣ್, ಖಜಾಂಚಿ ಸುಚಿತಗಣೇಶ್, ನಿರ್ದೇಶಕರಾದ ಮಧುರಜಯಂತ್, ಸುಜಾತಾ ಪ್ರಸನ್ನ, ಕೌಶಲ್ಯ ಅಶೋಕ್, ಸ್ವರೂಪ ಪ್ರಶಾಂತ್, ದೀಪ್ತಿ ಸುಬ್ರಾಯ, ಪಾರ್ಟನರ್ಸ್ ಆಫ್ ಟೆರ್ರಾ ಏಕೋಪರೇನೇರ್ಸ್ ಸಂಸ್ಥೆಯ ಡಾ. ಅಶ್ವಿನ್ ಕುಮಾರ್, ಅವಿನಾಶ್, ಕಾಫಿ ಬೆಳೆಗಾರರು ಹಾಗೂ ವ್ಯಾಪಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.