ಅತಿ ಎತ್ತರದ ಪ್ರದೇಶಕ್ಕೆ ಬೈಕ್‌ನಲ್ಲಿ ಸಾಗಿದ ಯುವಕರು

7

ಅತಿ ಎತ್ತರದ ಪ್ರದೇಶಕ್ಕೆ ಬೈಕ್‌ನಲ್ಲಿ ಸಾಗಿದ ಯುವಕರು

Published:
Updated:
Deccan Herald

ಬಾಳೆಹೊನ್ನೂರು: ದೇಶದ ಅತಿ ಎತ್ತರದ ಪ್ರದೇಶಕ್ಕೆ ಪಟ್ಟಣದ ನಾಲ್ವರು ಯುವಕರು ಬೈಕ್ ಮೂಲಕ ತೆರಳಿ ಸಾಧನೆ ಮಾಡಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದ ಎದುರಿನ ಮಲ್ನಾಡ್ ಕಾಫಿ ಅಂಗಡಿ ಮಾಲೀಕ ಸೈಯದ್ ಫಾಜಿಲ್ ಹುಸೇನ್ ಅವರ ಪುತ್ರ ಸೈಯ್ಯದ್ ಜುಹೇರ್, ಪಟ್ಟಣದ ಸ್ಟೀವನ್ ಪುತ್ರ ಮರೀಯಾ ಸಂತೋಷ್ ಡೇಸಾ, ನಿಖಿಲ್ ಹಾಗೂ ಅನೂಪ್ ತಂಡ ಬೆಂಗಳೂರಿನಿಂದ ಹೊರಟು ಪಂಜಾಬ್‌ನ ಚಂಡೀಗಡ ತಲುಪಿ, ಅಲ್ಲಿಂದ ಎನ್‌ಪೀಲ್ಡ್ ಬೈಕ್ ನಲ್ಲಿ ಅಮೃತಸರ, ಹಿಮಾಚಲ ಪ್ರದೇಶದ ಮನಾಲಿ ಮೂಲಕ ಜಮ್ಮು ಕಾಶ್ಮೀರದ ಲಡಾಕ್ ತಲುಪಿದರು.

ಅಲ್ಲಿಂದ ಲೇಹ್, ಪೂತುಲಾ, ಕಾರ್ಗಿಲ್, ದ್ರಾಸ್, ಸೋನುಮಾರ್ಗವಾಗಿ ತಂಡ ಶ್ರೀನಗರ ತಲುಪಿದರು. ನಂತರ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಪ್ರಪಂಚದ ಅತಿ ಎತ್ತರದ ಮೋಟಾರು ವಾಹನ ಮಾರ್ಗವಾದ ಸಮುದ್ರ ಮಟ್ಟದಿಂದ ಸುಮಾರು 17,982 ಸಾವಿರ ಅಡಿ ಎತ್ತರದಲ್ಲಿರುವ ಖಾರ್ ದುಂಗ್ ಲಾ ಪ್ರದೇಶಕ್ಕೆ ತೆರಳಿ ಅಲ್ಲಿಂದ ವಾಪಸಾಗಿದ್ದಾರೆ.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !