ಪಾಲಬೋವಿದೊಡ್ಡಿ: ಚಿರತೆ ಹಾವಳಿ

7

ಪಾಲಬೋವಿದೊಡ್ಡಿ: ಚಿರತೆ ಹಾವಳಿ

Published:
Updated:
Deccan Herald

ರಾಮನಗರ: ತಾಲ್ಲೂಕಿನ ಪಾಲಬೋವಿದೊಡ್ಡಿ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಿದ್ದು, ಬುಧವಾರ ಸಂಜೆ ಕುರಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಚಿಕ್ಕಲಿಂಗೇಗೌಡ ಎಂಬುವರು ಸಮೀಪದ ಹೊಲದಲ್ಲಿ ಕುರಿ ಮೇಯಿಸಿಕೊಂಡು ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಸಂದರ್ಭ ಚಿರತೆಯು ದಾಳಿ ನಡೆಸಿತು. ಕೂಡಲೇ ಸ್ಥಳದಲ್ಲಿ ಇದ್ದವರು ಕೂಗಿಗೊಂಡ ಕಾರಣ ಗಾಬರಿಗೊಂಡು ಕುರಿಯನ್ನು ಅಲ್ಲೇ ಬಿಟ್ಟು ಪರಾರಿಯಾಯಿತು. ಪಶು ವೈದ್ಯ ಕೃಷ್ಣಮೂರ್ತಿ ಸ್ಥಳಕ್ಕೆ ಧಾವಿಸಿ ಕುರಿಗೆ ಚಿಕಿತ್ಸೆ ನೀಡಿದರು.

ಎರಡು ದಿನದ ಹಿಂದೆ ಇದೇ ಚಿರತೆ ಗ್ರಾಮದ ರಾಮಣ್ಣ ಎಂಬುವರಿಗೆ ಸೇರಿದ ಟಗರನ್ನು ಹೊತ್ತೊಯ್ದಿತ್ತು. ಅದಕ್ಕೂ ಮುನ್ನ ಮಲ್ಲಮ್ಮ ಎಂಬುವರಿಗೆ ಸೇರಿದ ಮೇಕೆಯನ್ನು ಕಬಳಿಸಿತ್ತು. ಗ್ರಾಮದಲ್ಲಿ ಹೀಗೆ ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.

‘ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಗುಡ್ಡದಲ್ಲಿ ಚಿರತೆಯು ತನ್ನ ಎರಡು ಮರಿಗಳೊಂದಿಗೆ ವಾಸವಿದೆ. ಆಹಾರಕ್ಕಾಗಿ ಪದೇ ಪದೇ ಗ್ರಾಮಕ್ಕೆ ನುಗ್ಗುತ್ತಿದೆ. ಪಾಲಬೋವಿದೊಡ್ಡಿಯು ನಗರದ ಹೊರವಲಯದಲ್ಲಿ ಇದ್ದರೂ ಇಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಗ್ರಾಮದ ಸುತ್ತಮುತ್ತ ಬೋನು ಇರಿಸಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು’ ಸ್ಥಳೀಯರು ಒತ್ತಾಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !