ಬುಧವಾರ, ನವೆಂಬರ್ 13, 2019
22 °C
ವಸತಿ ಸಚಿವ ವಿ. ಸೋಮಣ್ಣ ಆರೋಪ

ಬಿಎಸ್‌ವೈ ಆಡಿಯೊವನ್ನು ಕಾಂಗ್ರೆಸ್‌ನವರು ತಿರುಚಿದ್ದಾರೆ: ಸೋಮಣ್ಣ

Published:
Updated:
Prajavani

ಚಿತ್ರದುರ್ಗ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹರೊಂದಿಗೆ ಮಾತನಾಡಿದ್ದಾರೆ ಎಂಬ ಆಡಿಯೊವನ್ನು ಕಾಂಗ್ರೆಸ್‌ ಮುಖಂಡರು ತಿರುಚಿದ್ದಾರೆ’ ಎಂದು ವಸತಿ ಸಚಿವ ವಿ. ಸೋಮಣ್ಣ ದೂರಿದರು.

ಮುರುಘಾಮಠದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಆ ಆಡಿಯೊವನ್ನು ನಾನೂ ಕೇಳಿದ್ದು, ಅದರಲ್ಲೇನಿದೆ. ಕಾಂಗ್ರೆಸ್ ನಾಯಕರಿಗೆ ಮಾಡೋದಕ್ಕೆ ಏನೂ ಕೆಲಸ ಇಲ್ಲ. ಅದಕ್ಕಾಗಿ ಆಡಿಯೊ ತಿರುಚಿ ಆಟವಾಡಲು ಮುಂದಾಗಿದ್ದಾರೆ. ಅದು ನಕಲಿ ಆಡಿಯೊವಾಗಿದ್ದು, ಎಲ್ಲಿ ಬೇಕಾದರೂ ಪ್ರಸ್ತಾಪಿಸಲಿ’ ಎಂದರು.

‘ಸಿದ್ದರಾಮಯ್ಯಗೆ ಭಾಷೆ ಮೇಲೆ ಹಿಡಿತವಿಲ್ಲ. ಅವರಪ್ಪ, ಇವರಪ್ಪ ಅಂತ ಮಾತಾಡುತ್ತಾರೆ. ಅವರಪ್ಪನದಾ ಅನ್ನುವ ಮಾತು ತಿರುಗಿಸಿ ಅವರಿಗೆ ಯಾರಾದರೂ ಕೇಳಿದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯಗಿಂತ ಬಹುಪಾಲು ಮೇಲು. ಎಂಟತ್ತು ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸಿದ್ದಾರೆ. ಅವರ ಅವಧಿಯಲ್ಲೇ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂಬುದನ್ನು ಅವರೇ ಮೊದಲು ತಿಳಿದುಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಬರ ತಾಂಡವವಾಡುತ್ತಿತ್ತು. ಈಗ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಅತೀವೃಷ್ಟಿ ಉಂಟಾಗಿದ್ದರೂ ಉತ್ತಮ ಮಳೆಯಾಗಿದೆ. ಅನೇಕ ಜಲಾಶಯಗಳು, ಕೆರೆ, ಕಟ್ಟೆಗಳು ತುಂಬಿವೆ. ಇನ್ನೂ ವಿವಿಧೆಡೆ ತುಂಬುವ ಹಂತ ತಲುಪಿವೆ. ಜತೆಗೆ ಹಲವೆಡೆ ರೈತರು ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)