ಶುಕ್ರವಾರ, ನವೆಂಬರ್ 22, 2019
20 °C

ವೇಶ್ಯಾವಾಟಿಕೆ; 10 ಮಂದಿ ವಶ

Published:
Updated:

ಚಿತ್ರದುರ್ಗ: ನಗರದ ಕುಂಬಾರ ಬೀದಿಯಲ್ಲಿ ಇರುವ ಶಾಂತಿ ಕಂಫರ್ಟ್ಸ್ ಲಾಡ್ಜ್ ಮೇಲೆ ಖಚಿತ ಮಾಹಿತಿ ಮೇರೆಗೆ ಭಾನುವಾರ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಲಾಡ್ಜ್‌ನ ಮಾಲೀಕ ಕರಿಯಪ್ಪ ಸೇರಿ ಐದು ಮಂದಿ ಪುರುಷರು, ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳಾದ ರಮೇಶ್, ನಹೀಂ ಅಹಮ್ಮದ್ ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಇಲ್ಲಿನ ಲಾಡ್ಜ್‌ವೊಂದರ ಕೊಠಡಿಗಳೊಳಗೆ ಸುರಂಗ ಮಾದರಿಯಲ್ಲಿ ಚಿಕ್ಕ ಕೋಣೆ ನಿರ್ಮಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದದ್ದು, ನಾಗರಿಕ ವಲಯದಲ್ಲಿ ತಲ್ಲಣ ಉಂಟು ಮಾಡಿತ್ತು.

 

ಪ್ರತಿಕ್ರಿಯಿಸಿ (+)