ಗೊಲ್ಲ ಸಮುದಾಯದಿಂದ ಶ್ರೀ ಕೃಷ್ಟಾಷ್ಟಮಿ ಆಚರಣೆ

7
ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಭಾಗಿ

ಗೊಲ್ಲ ಸಮುದಾಯದಿಂದ ಶ್ರೀ ಕೃಷ್ಟಾಷ್ಟಮಿ ಆಚರಣೆ

Published:
Updated:
Deccan Herald

ಹಿರಿಯೂರು: ಶ್ರೀಕೃಷ್ಣ ಪರಮಾತ್ಮ ಹಿಂದೂಗಳ ಆರಾಧ್ಯ ದೈವ. ಕೃಷ್ಣ ಜಯಂತಿ ಮೆರವಣಿಗೆಯನ್ನು ಅದ್ದೂರಿಯಿಂದ ಮಾಡುವುದು ತಪ್ಪಲ್ಲ. ಆದರೆ ಅದರಿಂದ ಬೇರೆ ಸಮುದಾಯದವರಿಗೆ ತೊಂದರೆ ಆಗಬಾರದು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೊಲ್ಲ ಸಮುದಾಯದವರಿಗೆ ಮನವಿ ಮಾಡಿದರು.

ನಗರದ ವೇದಾವತಿ ಬಡಾವಣೆಯ ಶ್ರೀಕೃಷ್ಣ ದೇವಸ್ಥಾನದ ಮುಂಭಾಗ ಶನಿವಾರ ಗೊಲ್ಲ ಸಮುದಾಯದಿಂದ ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗೊಲ್ಲ ಸಮುದಾಯದವರು ಹತ್ತೆಂಟು ವರ್ಷದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮೆರವಣಿಗೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷ ತಮ್ಮದೇ ಸಮುದಾಯದ ಶಾಸಕರು ಇರುವ ಕಾರಣ ಉತ್ಸವದ ಉತ್ಸಾಹ ಸಹಜವಾಗಿ ಹೆಚ್ಚಿದೆ. ಆದರೆ ಈ ಉತ್ಸವದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಕೊಡಗಿನಲ್ಲಿ ಅತಿಯಾದ ಮಳೆಯಿಂದ ಅಲ್ಲಿನ ಜನರ ಬದುಕು ಬೀದಿಗೆ ಬಿದ್ದಿದ್ದರೆ, ನಮ್ಮ ಭಾಗದಲ್ಲಿ ಮಳೆ ಇಲ್ಲದೆ ಜನರು ಕಂಗಾಲಾಗಿದ್ದಾರೆ. ನಮ್ಮಲ್ಲಿ ಮಳೆಯಾಗಿ ಜನರ ಬದುಕು ಹಸನಾಗುವಂತೆ ಮಾಡುವಂತೆ ಶ್ರೀಕೃಷ್ಣನನ್ನು ಪ್ರಾರ್ಥಿಸೋಣ’ ಎಂದು ಅವರು ಹೇಳಿದರು.

‘ಪ್ರಧಾನಿ ಮೋದಿ ಅವರಿಗೆ ಹಿಂದುಳಿದ ವರ್ಗದವರ ಬಗ್ಗೆ ಅಪಾರ ಕಾಳಜಿ ಇದೆ. ಗೊಲ್ಲ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಯಲ್ಲಿ ಮನವಿ ಮಾಡುತ್ತೇನೆ. ಗೊಲ್ಲರಿಗೆ ಪರಿಶಿಷ್ಟ ಪಂಗಡದ ಮೀಸಲು ಕಲ್ಪಿಸಲು ಸಮಿತಿ ರಚಿಸುವಂತೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ.ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲೂ ಪ್ರಯತ್ನ ಮಾಡುತ್ತೇನೆ. ಶ್ರೀಕೃಷ್ಣ ಪರಮಾತ್ಮ ಎಲ್ಲ ವರ್ಗ–ಸಮುದಾಯದ ಜನರಿಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸೋಣ’ ಎಂದು ಪೂರ್ಣಿಮಾ ಮನವಿ ಮಾಡಿದರು.

ಶ್ರೀಕೃಷ್ಣ, ಆಂಜನೇಯ, ವಿನಾಯಕ ದೇವರ ಮೂರ್ತಿಗಳನ್ನು ಒಳಗೊಂಡ ಮೆರವಣಿಗೆ ವೇದಾವತಿ ಬಡಾವಣೆಯಿಂದ ಆರಂಭಗೊಂಡು, ಪ್ರವಾಸಿ ಮಂದಿರ ವೃತ್ತ, ಗಾಂಧೀ ವೃತ್ತ, ನೆಹರೂ ವೃತ್ತ, ಆಸ್ಪತ್ರೆ ವೃತ್ತ, ಚರ್ಚ್ ರಸ್ತೆ, ಹುಳಿಯಾರು ರಸ್ತೆಯ ಮೂಲಕ ಮರಳಿ ಶ್ರೀಕೃಷ್ಣ ದೇವಸ್ಥಾನದ ಆವರಣಕ್ಕೆ ಸಾಗಿತು.

ಮೆರವಣಿಗೆಯಲ್ಲಿ ಕೇರಳದ ಚಂಡೆ ಕುಣಿತ, ಚಿಕ್ಕಮಗಳೂರಿನ ವೀರಗಾಸೆ, ಚಮ್ಮಾಳ, ಕೀಲುಗೊಂಬೆ ಕುಣಿತ, ಪೂಜಾ ಕುಣಿತ ಸಾರ್ವಜನಿಕರ ಗಮನ ಸೆಳೆದರೆ, ಡಿಜೆ ಸಂಗೀತಕ್ಕೆ ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ ಕುಣಿದು ಕುಪ್ಪಳಿಸಿದ ಯುವಕರ ಸಾಮರ್ಥ್ಯ ಅಚ್ಚರಿ ಮೂಡಿಸಿತು. ಗೊಲ್ಲ ಸಮುದಾಯದ ನೂರಾರು ಮುಖಂಡರು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !