ಗುರುವಾರ , ನವೆಂಬರ್ 14, 2019
22 °C

ಮ್ಯಾನ್‌ಹೋಲ್‌ಗೆ ವೃದ್ಧೆ ಇಳಿಸಿದ ಗುತ್ತಿಗೆದಾರ: ವಿಡಿಯೊ ವೈರಲ್‌

Published:
Updated:
Prajavani

ಚಿತ್ರದುರ್ಗ: ಇಲ್ಲಿನ ಜೈನ ದೇಗುಲ ಮುಂಭಾಗದ ರಸ್ತೆಯಲ್ಲಿ ಮ್ಯಾನ್‌ಹೋಲ್‌ನಲ್ಲಿ ವೃದ್ಧೆಯನ್ನು ಇಳಿಸಿ ಸ್ವಚ್ಛಗೊಳಿಸಿರುವ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ವೈರಲ್‌ ಆಗಿದೆ. ಈ ಪ್ರಕರಣದ ಬಗ್ಗೆ ವ್ಯಾಪಕವಾಗಿ ಟೀಕೆಗಳೂ ಕೇಳಿ ಬಂದಿವೆ.

ಖಾಸಗಿ ಗುತ್ತಿಗೆದಾರ ಹಣದ ಆಮಿಷ ತೋರಿಸಿ, ಯಾವುದೇ ರಕ್ಷಾಕವಚ ನೀಡದೆ ವೃದ್ಧೆಯನ್ನು ಮ್ಯಾನ್‌ಹೋಲ್‌ಗೆ ಇಳಿಸಿದ್ದಾರೆ. ಇದು ಅಮಾನವೀಯ ಕೃತ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮತ್ತು ಚಿತ್ರವನ್ನು ಅಪ್‌ಲೋಡ್‌ ಮಾಡಲಾಗಿದೆ.

ಮ್ಯಾನ್‌ಹೋಲ್‌ನ ಮುಚ್ಚಳ ತೆರೆದು ಇಬ್ಬರು ಯುವಕರೂ ಕೋಲಿನಲ್ಲಿ ಸ್ವಚ್ಛಗೊಳಿಸುತ್ತಿದ್ದಾರೆ. ವೃದ್ಧೆಯು ಮ್ಯಾನ್‌ಹೋಲ್‌ನ ಒಳಗೆ ಕಾಲು ಇಳಿಬಿಟ್ಟುಕೊಂಡು ಯುವಕರೊಂದಿಗೆ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಶುಕ್ರವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.

‘ಈ ಕುರಿತು ಸ್ಥಳ ಪರಿಶೀಲಿಸಲು ಪರಿಸರ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಕೃತ್ಯ ಎಸಗಿರುವುದು ಖಚಿತವಾದರೆ, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಮ್ಮ ಪೌರಕಾರ್ಮಿಕರು ಯಾರೂ ಮ್ಯಾನ್‌ಹೋಲ್‌ ಒಳಗೆ ಇಳಿಯುವುದಿಲ್ಲ’ ಎಂದು ಪೌರಾಯುಕ್ತ ಚಂದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

ಪ್ರತಿಕ್ರಿಯಿಸಿ (+)