ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ತೆರೆದ 95 ಮದ್ಯದಂಗಡಿ, ಮದ್ಯ ಖರೀದಿಗೆ ಮುಗಿಬಿದ್ದ ಗ್ರಾಹಕರು

Last Updated 4 ಮೇ 2020, 9:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ 95 ಮದ್ಯದಂಗಡಿಗಳು ಸೋಮವಾರ ಬಾಗಿಲು ತೆರೆದವು. ನಸುಕಿನಿಂದಲೇ ಮದ್ಯಕ್ಕೆ ಕಾಯುತ್ತ ನಿಂತಿದ್ದವರು ಮದ್ಯ ಖರೀದಿಸಲು ಮುಗಿಬಿದ್ದರು.

ಕೊರೊನಾ ಸೋಂಕಿನ ಕಾರಣಕ್ಕೆ ಒಂದೂವರೆ ತಿಂಗಳಿಂದ ಮದ್ಯ ಮಾರಾಟ ಸ್ಥಗಿತಗೊಂಡಿತ್ತು. ಹೀಗಾಗಿ, ಮೊದಲ ದಿನ ಎಲ್ಲ ಮದ್ಯದಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು.

ನಸುಕಿನಲ್ಲಿಯೇ ಮದ್ಯದಂಗಡಿಗೆ ಧಾವಿಸಿದವರು ಸರತಿ ಸಾಲಿನಲ್ಲಿ ನಿಂತಿದ್ದರು. ಅಂತರ ಕಾಪಾಡಿಕೊಳ್ಳಲು ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಮದ್ಯದಂಗಡಿ ಪ್ರವೇಶಕ್ಕೂ ಮುನ್ನವೇ ಸ್ಯಾನಿಟೈಸರ್‌ ಹಾಕಲಾಗುತ್ತಿತ್ತು. ಮಾಸ್ಕ್‌ ಧರಿಸಿದವರಿಗೆ ಮಾತ್ರ ಮದ್ಯ ಮಾರಾಟ ಮಾಡಲಾಯಿತು.

ಅಬಕಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಪ್ರತಿ ಅಂಗಡಿ ಬಳಿ ಇದ್ದಾರೆ. ಚಿತ್ರದುರ್ಗ, ನಾಯಕನಹಟ್ಟಿ ಸೇರಿ ಹಲವು ಮದ್ಯದಂಗಡಿ ಎದುರು ಅರ್ಧ ಕಿ.ಲೋ ಮೀಟರ್‌ಗೂ ಹೆಚ್ಚು ಸರತಿ ಸಾಲು ಇದೆ. ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ಅಂತರ ಕಾಯ್ದುಕೊಳ್ಳಲಿಲ್ಲ. ಮದ್ಯ ಖರೀದಿಗೆ ಜನರು ಮುಗಿಬಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT