ಶನಿವಾರ, ಮೇ 21, 2022
23 °C

ಚಿತ್ರದುರ್ಗ: ಪುಟಾಣಿ ಪೋರನ ಅಮೋಘ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಎಸ್‌ಆರ್‌ಎಸ್‌ ಶಿಕ್ಷಣ ಸಂಸ್ಥೆಯ ಒಂದನೇ ತರಗತಿ ವಿದ್ಯಾರ್ಥಿ ಎ.ಆರ್‌.ವಿದ್ವತ್ ಆರಾಧ್ಯ ಜ್ಞಾಪಕನ ಶಕ್ತಿ ಪ್ರದರ್ಶನದಲ್ಲಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ ಸೇರ್ಪಡೆಯಾಗಿದ್ದಾನೆ.

6 ವರ್ಷ, 6 ತಿಂಗಳ ವಿದ್ವತ್‌, 1,200ಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ. 195 ದೇಶಗಳ ಹೆಸರು, ಭಾರತದ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಹೆಸರನ್ನು ಹೇಳಿದ್ದಾನೆ. ಜೊತೆಗೆ 10 ರಿಂದ 30ರವರೆಗಿನ ಮಗ್ಗಿ, 20 ಸಂಸ್ಕೃತ ಶ್ಲೋಕ, 50 ಗಾದೆ, 60 ಹಿಂದೂ ಸಂವತ್ಸರ, 195 ಮಹಾಭಾರತ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಭಾರತದ ನದಿಗಳು ಹಾಗೂ 50 ಪದಬಂಧಗಳನ್ನು ಪ್ರಸ್ತುತಪಡಿಸಿದ್ದಾನೆ.

ತಂದೆ ಬಿ.ಎಂ. ರಾಘವೇಂದ್ರ, ತಾಯಿ ಎನ್‌.ಅಂಬಿಕಾ ದಂಪತಿಯ ಪುತ್ರನಾಗಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಧಿಕಾರಿ ಡಾ.ಟಿ.ಎಸ್. ರವಿ, ಪ್ರಾಂಶುಪಾಲ ಎಂ.ಎಸ್. ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು