ಧರ್ಮಪುರ: ಸಮೀಪದ ರಂಗೇನಹಳ್ಳಿಯಲ್ಲಿ ಮಳೆಯ ಕೊರತೆಯಂದ ಬೆಳೆಗಳು ಒಣಗುತ್ತಿದ್ದು, ಗ್ರಾಮಸ್ಥರು ಸೋಮವಾರ ಗ್ರಾಮದ ದೇವರಾದ ಪಾಪಣ್ಣ ನಾಯಕನಿಗೆ ಆರತಿ ಸೇವೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಿದರು.
ಗ್ರಾಮದಿಂದ ನಾಲ್ಕು ಕಿ.ಮೀ.ದೂರದಲ್ಲಿರುವ ಪಾಪಣ್ಣ ನಾಯಕ ದೇವರಿಗೆ ಗ್ರಾಮಸ್ಥರು ತಂಬಿಟ್ಟಿನ ಆರತಿ ಕಟ್ಟಿಕೊಂಡು ಕಾಲು ನಡಿಗೆಯಲ್ಲಿ ನಡೆದು ಹೋಗಿ ಭಕ್ತಿ ಪೂರ್ವಕವಾಗಿ ಆರತಿ ಸೇವೆ ಸಲ್ಲಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.