ಗುರುವಾರ , ಅಕ್ಟೋಬರ್ 17, 2019
27 °C

ನರಿಯನ್ನು ಆರೈಕೆ ಮಾಡಿದ ಸ್ವಾಮೀಜಿಗಳು

Published:
Updated:
Prajavani

ಚಿತ್ರದುರ್ಗ: ಹೊಳಲ್ಕೆರೆ ರಸ್ತೆ ಮಾರ್ಗದಲ್ಲಿ ಗುರುವಾರ ರಸ್ತೆ ದಾಟುವ ವೇಳೆ ನರಿಯೊಂದು ಲಾರಿಗೆ ಸಿಲುಕಿ ತಲೆಗೆ ಪೆಟ್ಟಾಗಿದ್ದು, ಸ್ವಾಮೀಜಿಗಳು ವಾಹನ ನಿಲ್ಲಿಸಿ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಿಂದ ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ಆಯೋಜಿಸಿದ್ದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 26ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ವಾಮೀಜಿಗಳು ಚಿತ್ರದುರ್ಗದಿಂದ ಹೊರಟಿದ್ದರು.

ಗಾಯಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ ನರಿಯನ್ನು ಗಮನಿಸಿದ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ವಾಹನ ನಿಲ್ಲಿಸಿ, ನೀರು ಕುಡಿಸುವ ಮೂಲಕ ಆರೈಕೆ ಮಾಡಿದರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಿವಮೊಗ್ಗದ ಬಸವ ಮರಳಸಿದ್ಧ ಸ್ವಾಮೀಜಿ, ರಾಯಚೂರಿನ ಬಸವ ಪ್ರಸಾದ ಶರಣರು, ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ ಇದ್ದರು.

Post Comments (+)