ಹಿರಿಯೂರು: ತಾಲ್ಲೂಕಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಪುರಾತನ ಇತಿಹಾಸ ಹೊಂದಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ನೂತನ ಗೋಪುರ ಹಾಗೂ ಕಳಶ ಪ್ರತಿಷ್ಠಾಪನೆ ಸಮಾರಂಭವನ್ನು ಆಗಸ್ಟ್ 29 ಮತ್ತು 30ರಂದು ನಡೆಸಲಾಗುತ್ತಿದೆ.
ಲೋಕ ಕಲ್ಯಾಣಾರ್ಥವಾಗಿ ಎರಡು ದಿನ ನಡೆಯುತ್ತಿರುವ ಧಾರ್ಮಿಕ ಕಾರ್ಯದಲ್ಲಿ ಹೋಮ, ಹವನ, ವೇದ ಪಾರಾಯಣ, ರಾಷ್ಟ್ರ ಕ್ಷೇಮ ಪ್ರಾರ್ಥನಾ, ಮಹಾ ಕುಂಭಾಭಿಷೇಕ, ಗ್ರಾಮದ ಮಹಿಳೆಯರಿಂದ ವಿಶೇಷ ಆರತಿ ಹಾಗೂ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ಪೂಜಾ ವಿಧಿ ವಿಧಾನಗಳನ್ನು ಕೂನಿಕೆರೆ ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ನರಸಿಂಹಮೂರ್ತಿ, ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ರಾಘು ಭಾರದ್ವಾಜ್ ನೆರವೇರಿಸಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪೂಜೆಯನ್ನು ಯಶಸ್ವಿಗೊಳಿಸಬೇಕು ಎಂದು ವೀರಾಂಜನೇಯ ಸ್ವಾಮಿ ಟ್ರಸ್ಟ್ ಮುಖ್ಯಸ್ಥ ಡಿ. ಗಿರೀಶ್ ಮನವಿ ಮಾಡಿದ್ದಾರೆ.