ಗುರುವಾರ , ಅಕ್ಟೋಬರ್ 17, 2019
28 °C

ಚಿತ್ರದುರ್ಗ: ಜನಸಾಗರದ ನಡುವೆ ಚಿತ್ರಲಿಂಗೇಶ್ವರ ಅಂಬಿನೋತ್ಸವ

Published:
Updated:

ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಒಂದೇ ದಿನ ಎರಡು ಬಾರಿ ಅಂಬಿನೊತ್ಸವ ಆವರಿಸುವುದು ಇಲ್ಲಿನ ವಿಶೇಷ. ದೇವಾಲಯದ ಆವರಣದಲ್ಲಿ ಬೆಳಿಗ್ಗೆ 5.30ರಿಂದ ರಿಂದ 6.30ರವರೆಗೆ ಆಂಜನೇಯ ಸ್ವಾಮಿಯ ಅಂಬಿನೋತ್ಸವ, 6.30 ರಿಂದ 7.30ರವರೆಗೆ ಚಿತ್ರಲಿಂಗೇಶ್ವರ ಸ್ವಾಮಿಯ ಅಂಬಿನೋತ್ಸವ ಆಚರಿಸಲಾಯಿತು.

ರಾಜ್ಯ, ಹೊರ ರಾಜ್ಯದ ಸಾವಿರಾರು ಭಕ್ತರು ಅಂಬಿನೋತ್ಸವಕ್ಕೆ ಸಾಕ್ಷಿಯಾದರು. ಭಕ್ತರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವರ ದರ್ಶನ ಪಡೆಯಲು ಸಾಧ್ಯವಾಗದವರು ದೇವಾಲಯದ ಹೊರಭಾಗದಲ್ಲೆ ಪೂಜೆ ಸಲ್ಲಿಸಿದರು. ಜಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಚಿತ್ರದುರ್ಗ, ಹೊಸದುರ್ಗ, ದಾವಣಗೆರೆ, ಶಿವಮೊಗ್ಗ ಕಡೆಗಳಿಂದ ಬರುವ ಭಕ್ತರಿಗೆ ಅನುಕೂಲ ಆಗುವಂತೆ ಹೆಚ್ಚುವರಿ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು.

Post Comments (+)