ಮೊಳಕಾಲ್ಮುರು: ತಾಲ್ಲೂಕು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಉಡ ಬೇಟೆಗಾರನೊಬ್ಬನ್ನು ವಶಕ್ಕೆ ಪಡೆದಿದ್ದಾರೆ.
ಬಾಂಡ್ರಾವಿ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯ ಯರಗುಂಡ್ಲು ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ ಉಡಗಳನ್ನು ಬೇಟೆಯಾಡಲು ಬಂದಿರುವುದಾಗಿ ತಿಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಕು ಲಕ್ಕನಹಳ್ಳಿ ಗ್ರಾಮದ ವೆಂಕಟೇಶ್ ಬಂಧಿತ. ಆತನಿಂ ಒಂದು ಜೀವಂತ ಉಡ, ಕೃತ್ಯಕ್ಕೆ ಬಳಸುವ 37 ಸಿಂಬೆ ಕಬ್ಬಿಣದ ತಂತಿಯನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ಪ್ರಭಾರ ವಲಯ ಅರಣ್ಯಾಧಿಕಾರಿ ಹಸನ್ ಬಾಷಾ, ಸಿಬ್ಬಂದಿ ಶೇಕ್ ಅಹಮದ್, ಪ್ರತಾಪ್ ಕಾರ್ಯಾಚರಣೆ ನಡೆಸಿದದ್ದರು.